ಸಿರಿಯಾ ಬಂಡುಕೋರ ಪಡೆಯ 7 ಮಂದಿಯನ್ನು ರಾಕೆಟ್ ಉಡಾಯಿಸಿ ಕೊಂದ ಟರ್ಕಿ!

masthmagaa.com:

ಸಿರಿಯಾದ ಬಂಡುಕೋರ ಪಡೆ ‘ಪೀಪಲ್ಸ್ ಪ್ರೊಟೆಕ್ಷನ್ ಯುನಿಟ್'(YPG)ಯ 7 ಸದಸ್ಯನ್ನು ಕೊಂದಿರೋದಾಗಿ ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ. ಉತ್ತರ ಸಿರಿಯಾದ ಸಿಬ್ರಿನ್ ಪ್ರದೇಶದ ಮೇಲೆ ಮತ್ತು ದಕ್ಷಿಣ ಟರ್ಕಿಯ ಒಕ್ಕುಪಿನಾರ್‌ನಲ್ಲಿ ಟರ್ಕಿಯ ಸೇನಾ ನೆಲೆಗಳ ಮೇಲೆ ವೈಪಿಜಿ ಭಾನುವಾರ ರಾಕೆಟ್ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಟರ್ಕಿಯ ಸೇನೆ ಸಿರಿಯಾದ ವೈಪಿಜಿಯ 7ಸದಸ್ಯರನ್ನು ಕೊಂದಿವೆ ಎಂದು ಹೇಳಿದೆ. ಟರ್ಕಿ ಸೈನಿಕರು, ಪೊಲೀಸ್ ಅಥವಾ ಸೇನಾ ನೆಲೆಗೆ ಯಾವುದೇ ಹಾನಿಯಾಗಿಲ್ಲ. ಅಂದ್ಹಾಗೆ ವೈಪಿಜಿಯನ್ನ ಟರ್ಕಿ, ಬಂಡುಕೋರ ಪಡೆ ಕುರ್ದಿಸ್ತಾನ್ ವರ್ಕರ್ಸ್‌ ಪಾರ್ಟಿ (PKK) ಸಿರಿಯನ್ ಉಪಶಾಖೆಯಾಗಿ ಪರಿಗಣಿಸಿದೆ. ಕುರ್ದಿಸ್ತಾನ್ ವರ್ಕರ್ಸ್‌ ಪಾರ್ಟಿ 30 ವರ್ಷಗಳಿಂದ ಟರ್ಕಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದೆ. ಟರ್ಕಿ, ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಪಿಕೆಕೆಯನ್ನು ಭಯೋತ್ಪಾದಕ ಸಂಘಟನೆ ಅಂತ ಗುರುತಿಸಿವೆ.

-masthmagaa.com

Contact Us for Advertisement

Leave a Reply