ಒಂದೇ ತಿಂಗಳ ಅವಧಿಯಲ್ಲಿ ಮತ್ತೆರೆಡು US ಹೆಲಿಕಾಪ್ಟರ್‌ಗಳು ಡಿಕ್ಕಿ! ಮೂವರು ಸಿಬ್ಬಂದಿ ಸಾವು!

masthmagaa.com:

ಇತ್ತೀಚೆಗೆ ಅಮೆರಿಕದ ಸೇನಾ ಹೆಲಿಕಾಪ್ಟರ್‌ಗಳ ಅಪಘಾತಗಳು ಹೆಚ್ಚಾಗ್ತಿವೆ. ಒಂದೇ ತಿಂಗಳ ಅಂತರದಲ್ಲಿ 2ನೇ ಅವಘಡ ಸಂಭವಿಸಿದೆ. ಅಮೆರಿಕದ ಅಲಾಸ್ಕ್‌ದಲ್ಲಿ 2 ಸೇನಾ ಹೆಲಿಕಾಪ್ಟರ್‌ಗಳು ಮತ್ತೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿವೆ. AH-64 Apache ಹೆಲಿಕಾಪ್ಟರ್‌ಗಳು ತರಬೇತಿ ಹಾರಾಟ ನಡೆಸಿ ವಾಪಾಸ್‌ ಆಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಅಂತ ಅಮೆರಿಕದ ಸೇನೆ ಹೇಳಿದೆ. ಇನ್ನು ಘಟನೆಯಲ್ಲಿ ಮೂವರು ಯೋಧರು ಮೃತಪಟ್ಟಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಅಂದ್ಹಾಗೆ ಕಳೆದ ತಿಂಗಳು ಮಾರ್ಚ್‌ನಲ್ಲಿ ಅಮೆರಿಕ ಸೇನೆಯ 2 ಬ್ಲ್ಯಾಕ್‌ಹಾಕ್‌ ಹೆಲಿಕಾಪ್ಟರ್‌ಗಳು ಕೂಡ ಇದೇ ರೀತಿ ತರಬೇತಿ ಹಾರಾಟ ಮಾಡುವ ಟೈಮಲ್ಲೇ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದವು. ಈ ಘಟನೆಯಲ್ಲಿ ಹೆಲಿಕಾಪ್ಟರ್‌ಗಳಲ್ಲಿದ್ದ ಎಲ್ಲ 9 ಸಿಬ್ಬಂದಿ ಮೃತಪಟ್ಟಿದ್ರು. ಕಳೆದ ಫೆಬ್ರವರಿಯಲ್ಲಿ ಅಲಬಾಮದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ಬ್ಲ್ಯಾಕ್‌ಹಾಕ್‌ ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ರು. ಅದಕ್ಕೂ ಮೊದಲು ಕಳೆದ ವರ್ಷದಲ್ಲಿ V-22B Osprey aircraft ನ್ಯಾಟೋ ಸೇನಾಭ್ಯಾಸಸ ವೇಳೆ ಮೌಂಟೇನ್‌ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ 4 ಯೋಧರು ಮೃತಪಟ್ಟಿದ್ರು. ಈ ರೀತಿ ಸಾಲು ಸಾಲು ಅಪಘಾತಗಳು ಉಂಟಾಗ್ತಿರೊ ಹಿನ್ನೆಲೆ, ತನ್ನ ಪೈಲೆಟ್‌ಗಳಿಗೆ ಹಾರಾಟ ನಡೆಸದಂತೆ ಅಮೆರಿಕ ಸೇನಾ ಸಿಬ್ಬಂದಿ ಮುಖ್ಯಸ್ಥ ಆದೇಶ ನೀಡಿದ್ದಾರೆ. ಕ್ರಿಟಿಕಲ್‌ ಮಿಷನ್‌ಗಳಲ್ಲಿ ಅಂದ್ರೆ ಪ್ರಮುಖ ಕಾರ್ಯಾಚರಣೆಗಳಲ್ಲಿ ಇನ್‌ವಾಲ್ವ್‌ ಆದ ಪೈಲೆಟ್‌ಗಳನ್ನ ಬಿಟ್ಟು ಉಳಿದ ಯಾವ ಪೈಲೆಟ್‌ಗಳು ವಿಮಾನ, ಹೆಲಿಕಾಪ್ಟರ್‌ ಓಡಿಸುವಂತಿಲ್ಲ. ಎಲ್ಲ ಪೈಲೆಟ್‌ಗಳು ತಮ್ಮ ತರಬೇತಿಯನ್ನ ಸಂಪೂರ್ಣವಾಗಿ ಮುಗಿಸೋವರೆಗೂ ಎಲ್ಲ ವೈಮಾನಿಕ ಕಾರ್ಯಾಚರಣೆಗಳನ್ನ ಸ್ಥಗಿತಗೊಳಿಸಬೇಕು ಅಂತ ಆದೇಶದಲ್ಲಿ ಹೇಳಲಾಗಿದೆ. ಇನ್ನು ಅಮೆರಿಕ ಸೇನೆಯ ಆಕ್ಟೀವ್‌ ಡ್ಯುಟಿ ಸಿಬ್ಬಂದಿಗೆ ಮೇ 1 ರಿಂದ 5ರವರೆಗೆ ತರಬೇತಿ ನೀಡಲಾಗುತ್ತೆ. ಹಾಗೂ ಆರ್ಮಿ ನ್ಯಾಷನಲ್‌ ಗಾರ್ಡ್‌ ಆಂಡ್‌ ರಿಸರ್ವ್‌ ಯುನಿಟ್‌ನ ಪೈಲೆಟ್‌ಗಳಿಗೆ ಮೇ 1ರಿಂದ 31 ರವರೆಗೆ ತರಬೇತಿ ನೀಡಲಾಗುತ್ತೆ ಅಂತ ಅಮೆರಿಕ ಸೇನೆಯ ವಕ್ತಾರ ಲೆಫ್ಟಿನೆಂಟ್‌ ಕರ್ನಲ್‌ ಟೆರೆನ್ಸ್‌ ಕೆಲ್ಲಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply