ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷ! ಕಾರಣವೇನು?

masthmagaa.com:

ಬ್ರಿಟನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ವಿರೋಧ ಪಕ್ಷ ಲೇಬರ್‌ ಪಾರ್ಟಿ, ಪ್ರಧಾನಿ ರಿಷಿ ಸುನಾಕ್‌ ಅವ್ರ ವಿರುದ್ಧ ಕ್ಯಾಂಪೇನ್‌ ಶುರು ಮಾಡಿದೆ. ಬ್ರಿಟನ್‌ನಲ್ಲಿ ಜೀವನ ವೆಚ್ಚ ಹೆಚ್ಚಾಗಿ ಬಿಕ್ಕಟ್ಟು ಉಂಟಾಗಿರೋದಕ್ಕೆ ರಿಷಿ ನೇತೃತ್ವದ ಕನ್ಸರ್ವೇಟಿವ್‌ ಸರ್ಕಾರವೇ ಹೊಣೆ ಅಂತ ಲೇಬರ್‌ ಪಕ್ಷ ಆರೋಪಿಸಿದೆ. ಇನ್ನು ಈ ಸಂಬಂಧ ಕೆಲ ಆ್ಯಡ್‌ಗಳನ್ನ ಬಿಡ್ತಾ ಇದ್ದು ಅದ್ರಲ್ಲಿ ನೇರವಾಗಿ ರಿಷಿ ಸುನಾಕ್‌ ಹಾಗು ಅವ್ರ ಪತ್ನಿ ಅಕ್ಷತಾ ಮೂರ್ತಿಯವ್ರನ್ನ ಟಾರ್ಗೆಟ್‌ ಮಾಡ್ತಿದೆ. ಒಂದು ಆ್ಯಡ್‌ನಲ್ಲಿ “ಕೆಲಸ ಮಾಡೋ ಜನರಿಂದ ಮಾತ್ರ ಟ್ಯಾಕ್ಸ್‌ ಕಟ್ಟಿಸ್ಕೊಂಡು, ನಿಮ್ಮ ಫ್ಯಾಮಿಲಿ ಮಾತ್ರ ಎಸ್ಕೇಪ್‌ ಮಾಡೋದು ಸರಿನಾ ರಿಷಿ ಸುನಾಕ್‌ ಅಂತ ಕೇಳಿದೆ. ಜೊತೆಗೆ ರಿಷಿ ಸುನಾಕ್‌ಗೆ ಇದು ಸರಿ ಅನ್ನಿಸುತ್ತೆ ಅಂತ ಕೂಡ ಹೇಳಿದೆ. ಅಂದ್ಹಾಗೆ ರಿಷಿ ಅವ್ರ ಪತ್ನಿ ಅಕ್ಷತಾ ಮೂರ್ತಿಯವ್ರು ಟ್ಯಾಕ್ಸ್‌ ಕಟ್ತಿಲ್ಲ ಅನ್ನೋದು ಯುಕೆಯಲ್ಲಿ ಈ ಹಿಂದೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅದನ್ನೇ ಲೇಬರ್‌ ಪಾರ್ಟಿ ಇಲ್ಲಿ ಯೂಸ್‌ ಮಾಡ್ತಾ ಇದೆ.

-masthmagaa.com

Contact Us for Advertisement

Leave a Reply