ʻಕ್ಯಾಮಿಕೇಜ್‌ ಡ್ರೋನ್‌ʼಗಳಿಂದ ಯುಕ್ರೇನ್‌ ಮೇಲೆ ಆಕ್ರಮಣ ಮಾಡಿದ ರಷ್ಯಾ ಪಡೆ!

masthmagaa.com:

ಯುಕ್ರೇನ್‌ ರಾಜಧಾನಿ ಕಿಯೇವ್‌ ಮೇಲೆ ರಷ್ಯಾ ತನ್ನ ದಾಳಿಯನ್ನ ಮುಂದುವರೆಸಿದೆ. ಕಿಯೇವ್‌ನ ಶೆವಚೆನ್‌ಕಿವಿಸ್ಕಿ ಎಂಬಲ್ಲಿ ಹಲವಾರು ಸ್ಪೋಟಗಳು ಕೇಳಿಬಂದಿವೆ. ರಷ್ಯಾ ಪಡೆ ʻಕ್ಯಾಮಕಾಜೀ ಡ್ರೋನ್‌ʼನಿಂದ ದಾಳಿ ಮಾಡಿದೆ ಅಂತ ಯುಕ್ರೇನ್‌ ಅಧಿಕಾರಿ ಆಂಡ್ರಿಯ್‌ ಯರ್ಮಾಕ್‌ ಆರೋಪಿಸಿದ್ದಾರೆ. ಜೊತೆಗೆ ಇದು ಅವ್ರಿಗೆ ಹೆಲ್ಪ್‌ ಮಾಡುತ್ತೆ ಅಂತ ಅನ್ಕೊಂಡಿದಾರೆ. ಆದ್ರೆ ಅದು ಯುದ್ದದಲ್ಲಿನ ಅವರ ಹತಾಶೆಯನ್ನ ತೋರಿಸುತ್ತೆ ಅಂತ ಯರ್ಮಾಕ್‌ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ. ಸ್ಪೋಟದಿಂದ ಉಂಟಾದ ಹಾನಿಯ ವರದಿ ಇನ್ನಷ್ಟೇ ಬರಬೇಕಿದೆ. ವೈಮಾನಿಕ ದಾಳಿಯ ಅಲರ್ಟ್‌ನ್ನ ನಗರದಲ್ಲಿ ಮುಂದುವರೆಸಲಾಗಿದೆ. ಹಾಗೂ ಅಲ್ಲಿನ ಜನರಿಗೆ ಮನೆಗಳಲ್ಲಿ ಇರಿ ಅಂತ ಸೂಚಿಸಲಾಗಿದೆ ಅಂತ ನಗರದ ಮೇಯರ್‌ ತಿಳಿಸಿದ್ದಾರೆ. ಅಂದ್ಹಾಗೆ ಅಕ್ಟೋಬರ್‌ 10ರಂದು ಕೂಡ ಕಿಯೇವ್ ಹಾಗೂ ಇತರೆಡೆ ರಷ್ಯಾ ಕ್ಷಿಪಣಿ ದಾಳಿಯನ್ನ ನಡೆಸಿತ್ತು. ಈ ದಾಳಿಗಳಲ್ಲಿ ಒಟ್ಟು 19 ಜನ ಮೃತಪಟ್ಟಿದ್ದು, 105 ಜನ ಗಾಯಗೊಂಡಿದ್ರು. ಇತ್ತ ಡಾಂಬಸ್‌ ಪ್ರದೇಶದ ಸೊಲೆಡಾರ್‌ ಹಾಗೂ ಬಖಮುತ್‌ ಪ್ರದೇಶಗಳಲ್ಲೂ ಭಾರಿ ಕದನ ನಡೆಯುತ್ತಿದೆ ಅಂತ ಯುಕ್ರೇನ್‌ ಅಧ್ಯಕ್ಷ ವೊಲೊಡಿಮರ್‌ ಝೆಲೆನ್ಸ್ಕಿ ಹೇಳಿದ್ದಾರೆ. ರಷ್ಯಾ ಪಡೆಯ ಮುಂದಿನ ಟಾರ್ಗೆಟ್ ಬಖಮುತ್‌ ಪ್ರದೇಶ. ಸೊಲೆಡಾರ್‌ ಕೂಡ ಬಖಮುತ್‌ ಪ್ರದೇಶದ ಉತ್ತರದಲ್ಲಿದೆ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಯುಕ್ರೇನ್‌ ಗಡಿಯಲ್ಲಿರೊ ರಷ್ಯಾ ಬಲ್ಗೊರೋಡ್‌ ಪ್ರದೇಶದ ಮೇಲೆ ಕೂಡ ದಾಳಿ ಮುಂದುವರೆದಿದೆ. ನಿನ್ನೆ ಇಲ್ಲಿ ನಡೆದ ದಾಳಿಯಲ್ಲಿ 4 ಜನ ಗಾಯಗೊಂಡಿದ್ರು. ಅಂದ್ಹಾಗೆ ಮೊನ್ನೆ ಕೂಡ ಇಲ್ಲಿನ ಪವರ್‌ ಗ್ರಿಡ್‌ ಮೇಲೆ ದಾಳಿ ನಡೆಸಲಾಗಿತ್ತು. ಇತ್ತ ಕ್ರೈಮಿಯಾಕ್ಕೆ ರಷ್ಯಾದಿಂದ ಸಂಪರ್ಕ ಒದಗಿಸುತ್ತಿದ್ದ ಬ್ರಿಡ್ಜ್‌ ಇತ್ತೀಚೆಗೆ ಸ್ಪೋಟಗೊಂಡಿತ್ತು. ಇದು ಯುಕ್ರೇನ್‌ ಮೇಲೆ ರಷ್ಯಾ ಇನ್ನಷ್ಟು ಮುಗಿ ಬೀಳೋಕೆ ಕಾರಣವಾಗಿತ್ತು. ಈಗ ಈ ಸೇತುವೆಯನ್ನ ರಷ್ಯಾ ಮುಂದಿನ ವರ್ಷ ಜುಲೈ ಒಳಗೆ ರಿಪೇರಿ ಮಾಡುತ್ತೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply