ಯೋಗ ಮಾಡಿ ಚೀನಾದಲ್ಲಿ ಸಂಚಲನ ಮೂಡಿಸಿದ ಭಾರತೀಯ UN ಮುಖ್ಯಸ್ಥ

masthmagaa.com:

ಚೀನಾ-ಭಾರತ ನಡುವಿನ ಉದ್ವಿಗ್ನತೆ ನಡುವೆ ಇದೀಗ ಭಾರತ ಮೂಲದ ಚೀನಾದಲ್ಲಿರೋ ವಿಶ್ವಸಂಸ್ಥೆಯ ಮುಖ್ಯಸ್ಥರಾದ ಸಿದ್ದಾರ್ಥ್‌ ಚಟರ್ಜಿ ಚೀನಾದಲ್ಲಿ ಭಾರೀ ಸದ್ದು ಮಾಡ್ತಿದ್ದಾರೆ. ತಾವು ಯೋಗ ಮಾಡಿರೋ ಡಾಕ್ಯುಮೆಂಟ್ರಿಯೊಂದನ್ನ ರಿಲೀಸ್‌ ಮಾಡಿ ಚೀನಾದ ಸೋಶಿಯಲ್‌ ಮೀಡಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಬೀಜಿಂಗ್‌ನಲ್ಲಿ -17 ಡಿಗ್ರೀ ಸೆಲ್ಸಿಯಸ್‌ಗಿಂತಲೂ ಕಡಿಮೆ ತಾಪಮಾನದಲ್ಲಿ ಶರ್ಟ್‌ ಕೂಡ ಹಾಕದೇ…. ಹಿಮಗಡ್ಡೆ ಕಟ್ಟಿರೋ ಸರೋವರದ ಮೇಲೆ ಕೂತು ಕಠಿಣ ಯೋಗಾಭ್ಯಾಸ ಮಾಡಿದ್ದಾರೆ. ಉಸಿರಾಟದ ಅಭ್ಯಾಸ ಮಾಡಿ…ಹಲವಾರು ಕಠಿಣ ಆಸನಗಳನ್ನ ಮಾಡಿ ತೋರಿಸಿದ್ದಾರೆ. `Breathing for Good Health’ ಅನ್ನೋ ಟೈಟಲ್‌ನ ಸುಮಾರು ನಾಲ್ಕುವರೆ ನಿಮಿಷಗಳ ಈ ಡಾಕ್ಯುಮೆಂಟರಿ ವಿಡಿಯೋ ಚೀನಾದಲ್ಲಿ ಈಗ ಸಂಚಲನ ಮೂಡಿಸ್ತಿದೆ. ಅಂದ್ಹಾಗೆ 60 ವರ್ಷದ ಚಟರ್ಜಿ ಅವ್ರು ಈ ಹಿಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ರು.

-masthmagaa.com

Contact Us for Advertisement

Leave a Reply