ಮತ್ತೆ ಯುಕ್ರೇನ್‌ಗೆ 3,200 ಕೋಟಿ ಭದ್ರತಾ ಪ್ಯಾಕೇಜ್‌ ಘೋಷಿಸಿದ ಅಮೆರಿಕ!

masthmagaa.com:

ಯುಕ್ರೇನ್‌ ಮೇಲೆ ತನ್ನ ರಣಾಕ್ರಮಣವನ್ನ ರಷ್ಯಾ ಮುಂದುವರೆಸಿದೆ.ಇದರ ನಡುವೆಯೇ ರಷ್ಯಾದ ನಿಯಂತ್ರಣದಲ್ಲಿರೋ ಖೆರ್ಸಾನ್‌ನಲ್ಲಿನ ಜನರನ್ನು ಅಲ್ಲಿಂದ ಸ್ಥಳಾಂತರ ಮಾಡೋಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಾರ್ವಜನಿಕವಾಗಿ ಒಪ್ಪಿಗೆ ನೀಡಿದ್ದಾರೆ. ಇತ್ತ ಅಮೆರಿಕದ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವಾನ್‌ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿಯನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಯುಕ್ರೇನ್‌ಗೆ ಹೆಚ್ಚುವರಿ ಭದ್ರತೆಗಾಗಿ 400 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 3,200 ಸಾವಿರ ಕೋಟಿ ರೂಪಾಯಿ ಹಣವನ್ನು ನೀಡೋದಾಗಿ ಹೇಳಿದ್ದಾರೆ. ಈ ಪ್ಯಾಕೇಜ್‌ T-72 ಟ್ಯಾಂಕ್‌, 250 HAWK ಮಿಸೈಲ್‌ಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನ ಒಳಗೊಂಡಿದೆ ಅಂತ ಹೇಳಿದ್ದಾರೆ.ಇತ್ತ ರಷ್ಯಾ ಯುಕ್ರೇನ್‌ ಮೇಲೆ ಆಕ್ರಮಣ ಮಾಡಿ 9 ತಿಂಗಳಾಗಿದೆ, ಹೀಗಾಗಿ ಯುಕ್ರೇನ್‌ ಜನ ತಮ್ಮ ದೇಶದ ಮೇಲೆ ಪರಮಾಣು ಶಸ್ತ್ರಾಸ್ತ್ರಗಳ ದಾಳಿ ಆಗುತ್ತೊ ಇಲ್ವೊ ಅಂತ ಕೇಳೊದಿಲ್ಲ. ಬದ್ಲಾಗಿ ಅವ್ರು ಇಂತಹ ಸಂದರ್ಭ ಬಂದ್ರೂ ಅದನ್ನ ಫೇಸ್‌ ಮಾಡೋದು ಹೇಗೆ ಅಂತ ಕೇಳ್ತಿದ್ದಾರೆ. ಅದಕ್ಕೆ ತಯಾರಿ ನಡೆಸ್ತಿದಾರೆ ಅಂತ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.

-masthmagaa.com

Contact Us for Advertisement

Leave a Reply