ಒಂದು ವೋಟ್‌ ಮೆಜಾರಿಟಿಯಲ್ಲಿ ಅಮೆರಿಕ ಕ್ಯಾಬಿನೆಟ್‌ ಸೆಕ್ರೆಟರಿ ಔಟ್!

masthmagaa.com:

ಇನ್ನು ಇದೇ ಅಮೆರಿಕದಲ್ಲಿ ಮೆಕ್ಸಿಕೊ ಗಡಿ ವಿಚಾರ ನಿರ್ವಹಣೆ ಕುರಿತು ಅಪಸ್ವರ ಎದ್ದಿತ್ತು. ಇದೀಗ ರಿಪಬ್ಲಿಕನ್‌ ಸಂಸದರು ಬೈಡೆನ್‌ ಸರ್ಕಾರದ ವಿರುದ್ಧವಾಗಿ ಕ್ರಮ ಒಂದನ್ನ ತಗೊಂಡಿದ್ದಾರೆ. ಹೋಮ್‌ಲ್ಯಾಂಡ್‌ ಪ್ರದೇಶದ ಸೆಕ್ಯೂರಿಟಿ ಸೆಕ್ರೆಟರಿ ಅಲೆಜಾಂಡ್ರೊ ಮಯೋರ್ಕಸ್‌ ವಿರುದ್ಧ ವೋಟ್‌ ಮಾಡಿ ಅವರನ್ನ ಉಚ್ಛಾಟನೆ ಮಾಡಿದ್ದಾರೆ. 150 ವರ್ಷಗಳಲ್ಲೇ ಮೊದಲ ಬಾರಿಗೆ ಕ್ಯಾಬಿನೆಟ್‌ ಸೆಕ್ರೆಟರಿ ಒಬ್ರನ್ನ ಈ ರೀತಿ ಇಂಪೀಚ್‌ ಮಾಡಲಾಗಿದೆ. ಅದೂ ಕೇವಲ ಒಂದು ವೋಟ್‌ನಿಂದ.. 214-213 ವೋಟ್‌ಗಳಿಂದ ಮಯೋರ್ಕಸ್‌ರನ್ನ ಉಚ್ಛಾಟನೆ ಮಾಡಲಾಗಿದೆ.

ಇನ್ನೊಂದು ಕಡೆ ಮಹತ್ವದ ಬೆಳವಣಿಗೆಯಲ್ಲಿ ನ್ಯೂಯಾರ್ಕ್‌ ಸ್ಪೆಷಲ್‌ ಎಲೆಕ್ಷನ್‌ನಲ್ಲಿ ಡೆಮಾಕ್ರಟಿಕ್‌ ಪಕ್ಷದ ಟಾಮ್‌ ಸುಒಜಿ಼ ಅನ್ನೋರು ಗೆಲುವು ಸಾಧಿಸಿದ್ದಾರೆ. ಈ ವಿಚಾರ ಯಾಕೆ ಮಹತ್ವದ್ದು ಅಂದ್ರೆ ಈ ಎಲೆಕ್ಷನ್‌ನ್ನ ಮುಂಬರೋ ಅಂತಿಮ ಅಧ್ಯಕ್ಷೀಯ ಚುನಾವಣೆಗೆ ಕೀ ಎಲೆಕ್ಷನ್‌ ಅಂತ್ಲೇ ಕನ್ಸಿಡರ್‌ ಮಾಡಲಾಗಿತ್ತು. ನ್ಯೂಯಾರ್ಕ್‌ನ ಲಾಂಗ್‌ ಐಲ್ಯಾಂಡ್‌ ಡಿಸ್ಟ್ರಿಕ್ಟ್‌ ಅಮೆರಿಕದ ಮತದಾರದ ಸೆಂಟಿಮೆಂಟ್‌ನ ಕೀ ಇಂಡಿಕೇಟರ್‌ ಅಂತಾನೆ ಹೇಳಲಾಗ್ತಿತ್ತು. ಈ ಕ್ಷೇತ್ರದಲ್ಲಿ 2020ರಲ್ಲ ಅಧ್ಯಕ್ಷ ಜೋ ಬೈಡೆನ್‌ ಜಯ ಗಳಿಸಿದ್ರು. ಆದ್ರೆ 2022ರ ಮಧ್ಯಂತರ ಎಲೆಕ್ಷನ್‌ನಲ್ಲಿ ರಿಪಬ್ಲಿಕನ್‌ ಪಕ್ಷದ ಜಾರ್ಜ್‌ ಸ್ಯಾಂಟೋಸ್‌ ಗೆದ್ದಿದ್ರು. ಈಗ ಮತ್ತೆ ಡೆಮಾಕ್ರಟಿಕ್‌ ಪಕ್ಷದ ಟಾಮ್‌ ಸುಒಜಿ಼ ಗೆದ್ದಿದ್ದಾರೆ. ರಿಪಬ್ಲಿಕನ್‌ ಪಕ್ಷದ ಸ್ಯಾಂಟೋಸ್‌ ಕಳೆದ ಡಿಸೆಂಬರ್‌ನಲ್ಲಿ ಫ್ರಾಡ್‌ ಕೇಸ್‌ಗಳಿಂದಾಗಿ ಅಮೆರಿಕ ಕಾಂಗ್ರೆಸ್‌ನಿಂದ ಎಕ್ಸ್‌ಪೆಲ್‌ ಆಗಿದ್ರು. ಆ ಸ್ಥಾನವನ್ನ ಈಗ ಮತ್ತೆ ಟಾಮ್‌ ಸುಒಜಿ಼ ಗೆದ್ದಿರೋದು ಜೋ ಬೈಡೆನ್‌ರ ಡೆಮಾಕ್ರಟಿಕ್‌ ಪಕ್ಷಕ್ಕೆ ಹೊಸ ಬೂಸ್ಟ್‌ ಸಿಕ್ಕಿದೆ.

-masthmagaa.com

Contact Us for Advertisement

Leave a Reply