ರಷ್ಯಾ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಿದೆ: ಅಮೆರಿಕ

masthmagaa.com:

ಜಾಗತಿಕ ವೇದಿಕೆಯಲ್ಲಿ ಭಾರತದ ನಾಯಕತ್ವ ಮತ್ತು ಭಾರತೀಯ ಸೇನೆಯಲ್ಲಿ ಆಗ್ತಿರೋ ಬದಲಾವಣೆ ಬಗ್ಗೆ ಇದೀಗ ಅಮೆರಿಕ ಹಾಡಿ ಹೊಗಳಿದೆ. ಭಾರತ ತನ್ನ ಸೇನೆಯನ್ನ ಆಧುನೀಕರಣಗೊಳಿಸಲು ಕ್ರಮ ಕೈಗೊಂಡಿದೆ. ರಷ್ಯಾದ ಶಸ್ತ್ರಾಸ್ತ್ರಗಳ ಮೇಲೆ ಡಿಪೆಂಡ್‌ ಆಗೋದನ್ನ ಕಡಿಮೆ ಮಾಡಿದೆ ಅಂತ ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆಯ ನಿರ್ದೇಶಕರಾದ ಲೆಫ್ಟಿನಂಟ್‌ ಜನರಲ್‌ ಜೆಫ್ರಿ ಎ. ಕ್ರೂಸ್‌ ಹೇಳಿದ್ಧಾರೆ. ʻಕಳೆದ ಕೆಲ ವರ್ಷಗಳಿಂದ, ಭಾರತವು ತನ್ನನ್ನ‌ ತಾನು ಜಾಗತಿಕ ನಾಯಕ ಅಂತ ತೋರಿಸಿಕೊಟ್ಟಿದೆ. ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಗ್ಲೋಬಲ್‌ ಲೀಡರ್‌ ಅಂತ ಪ್ರೂವ್‌ ಮಾಡಿದೆ. ಈ ಮೂಲಕ ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಚೀನಾಗೆ ಕೌಂಟರ್‌ ಕೊಡೋಕೆ ತನ್ನ ಇಚ್ಛೆಯನ್ನ ಪ್ರದರ್ಶಿಸಿದೆ. ಚೀನಾ ತನ್ನ ಹಕ್ಕು ಚಲಾಯಿಸೋ ಇಂಡೋ-ಪೆಸಿಫಿಕ್‌ ಪ್ರದೇಶಗಳಲ್ಲಿ ಭಾರತ ತನ್ನ ಪಾರ್ಟನರ್‌ಶಿಪ್‌ ಬಲಪಡಿಸಿದೆ. ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್‌ ಮತ್ತು ಜಪಾನ್‌ ಜೊತೆಗಿನ ಸಹಕಾರವನ್ನ ಇನ್ನೂ ಆಳವಾಗಿಸಿದೆ. 2023ರಲ್ಲಿ ಚೀನಾಗೆ ಟಕ್ಕರ್‌ ನೀಡಲು ಭಾರತ ತನ್ನ ಸೇನೆಯನ್ನ ಆಧುನೀಕರಣಗೊಳಿಸಲು ಕ್ರಮ ಕೈಗೊಂಡಿದೆ. ರಷ್ಯಾ ಶಸ್ತ್ರಾಸ್ತ್ರಗಳ ಮೇಲಿನ ಅವಲಂಬನೆ ಕಡಿಮೆ ಮಾಡ್ತಾ ಬಂದಿದೆ. 2024ರಲ್ಲಿ ಭಾರತ ʻಮೇಕ್‌ ಇನ್‌ ಇಂಡಿಯಾʼ ಬಗ್ಗೆ ಗಮನಹರಿಸಲಿದೆ. ಇದು ಕೂಡ ಸೇನೆಯನ್ನ ಆಧುನೀಕರಣಗೊಳಿಸುವ ಒಂದು ಭಾಗವಾಗಿದೆ. ಅಷ್ಟೇ ಅಲ್ದೇ ಚೀನಾಗೆ ಟಕ್ಕರ್‌ ಕೊಡೋ ಉದ್ದೇಶವನ್ನೂ ಹೊಂದಿದೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply