ಭಾರತ ಚೀನಾ ಯುದ್ಧ ಮಾಡೋ ಸಾಧ್ಯತೆ ಇದೆ: US ರಿಪೋರ್ಟ್!

masthmagaa.com:

ಭಾರತ ಹಾಗೂ ಚೀನಾ ನಡುವೆ ಯುದ್ದ ಆಗೋ ಸಾಧ್ಯತೆ ಹೆಚ್ಚಾಗ್ತಿದೆ ಅಂತ ಈಗ ಅಮೆರಿಕ ಕೂಡ ಬೆಚ್ಚಿಬೀಳಿಸೋ ರಿಪೋರ್ಟ್‌ ಕೊಟ್ಟಿದೆ. ಮೊನ್ನೆಯಷ್ಟೇ ಬ್ರಿಟನ್‌ ಮೂಲದ ರೂಸಿ ಸಂಸ್ಥೆ ಈ ಬಗ್ಗೆ ವಿಸ್ತೃತ ವರದಿ ನೀಡಿತ್ತು. ನಿಮಗೆ ಆ ಬಗ್ಗೆ ವಿಶೇಷ ವರದಿಯಲ್ಲಿ ಮಾಹಿತಿ ಕೊಟ್ಟಿದ್ವಿ. ಅದರ ಬೆನ್ನಲ್ಲೇ ಈಗ ಅಮೆರಿಕದ ಇಂಟಲಿಜೆನ್ಸ್‌ ರಿಪೋರ್ಟ್‌ ಕೂಡ ಭಾರತ ಮತ್ತು ಚೀನಾ ನಡುವೆ ಮುಂದೊಂದಿನ ಯುದ್ಧ ನಡೆಯೋ ಸಾಧ್ಯತೆ ಇದೆ ಅಂತ ಹೇಳಿದೆ…ಇಂಡೋ-ಚೀನಾ ಗಡಿಭಾಗದಲ್ಲಿ ಸೇನಾ ಪಡೆಗಳ ನಿಯೋಜನೆ ಹೆಚ್ಚಾಗಿ, ಉದ್ವಿಗ್ನತೆ ಹೆಚ್ಚಾಗಲಿದೆ…ಬಿರುಕು ಮೂಡಿರೋ ಭಾರತ ಮತ್ತು ಚೀನಾ ಸಂಬಂಧದಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹಾಗೇ ಉಳಿಯಲಿದೆ. ಯಾವ್ದೇ ರೀತಿ ಪಾಸಿಟಿವ್‌ ಚೇಂಜ್‌ ಕಾಣೋದಕ್ಕೆ ಸಾಧ್ಯವಾಗ್ತಿಲ್ಲ. ಇದು ಶಸ್ತ್ರಸಜ್ಜಿತ ಯುದ್ದದ ಸಂಭಾವ್ಯತೆಯನ್ನ ಹೆಚ್ಚಳ ಮಾಡ್ತಿದೆ ಅಂತ ಅಮೆರಿಕ ತನ್ನ ರಿಪೋರ್ಟ್‌ನಲ್ಲಿ ತಿಳಿಸಿದೆ. ಇನ್ನು 2020ರ ಗಲ್ವಾನ್‌ ಸಂಘರ್ಷದ ನಂತ್ರ ಯಾವ್ದೇ ರೀತಿ ದೊಡ್ಡ ಪ್ರಮಾಣದ ಸಂಘರ್ಷ ನಡೆದಿಲ್ಲ. ಆದ್ರೂ ಚೀನಾ ಭಾರತ ಗಡಿ ಉದ್ವಿಗ್ನತೆ ಹೆಚ್ಚಾಗ್ತಾ ಇದೆ. ಎರಡೂ ಪಡೆಗಳು ಸೇನಾ ಜಮಾವಣೆ ಜಾಸ್ತಿ ಮಾಡ್ತಿವೆ ಇದೆಲ್ಲವೂ ಮುಂದೊಂದು ದಿನ ಯುದ್ದ ನಡೆಯೋ ಸಾಧ್ಯತೆಯನ್ನ ಜಾಸ್ತಿ ಮಾಡಿದೆ ಅಂತ ಅಮೆರಿಕ ತಿಳಿಸಿದೆ. ಇನ್ನು ಇದೇ ರಿಪೋರ್ಟ್‌ನಲ್ಲಿ ಪಾಕಿಸ್ತಾನದ ಜೊತೆಗೂ ಯುದ್ದ ಆಗೋ ಸಾಧ್ಯತೆ ಇದೆ ಅಂತ ಅಮೆರಿಕ ತನ್ನ ರಿಪೋರ್ಟ್‌ನಲ್ಲಿ ತಿಳಿಸಿದೆ. LOCಯಲ್ಲಿ ಕದನ ವಿರಾಮ ಪಾಲನೆ ಸರಿಯಾಗಿ ಆಗ್ತಾ ಇಲ್ಲ. ಹೀಗಾಗಿ ಎರಡೂ ಕಡೆಗಳಿಂದ ಸಣ್ಣ ಪ್ರಚೋದನೆ ಬಂದ್ರೂ ಯುದ್ದ ಆಗೋ ಸಂಭವ ಜಾಸ್ತಿ ಇದೆ ಅಂತೇಳಿದೆ.

-masthmagaa.com

Contact Us for Advertisement

Leave a Reply