ಅಮೆರಿಕದಲ್ಲಿ ಕಂಟ್ರೋಲ್​ಗೆ ಸಿಗ್ತಿಲ್ಲ ಕೊರೋನಾ ವೈರಸ್!

masthmagaa.com:

ಅಮೆರಿಕದಲ್ಲಿ ಕೊರೋನಾ ವೈರಸ್​ ನಿಯಂತ್ರಣಕ್ಕೆ ಸಿಗ್ತಿಲ್ಲ. ಕಳೆದೊಂದು ತಿಂಗಳಿಂದ ಪ್ರತಿದಿನ ಒಂದೂವರೆ ಲಕ್ಷದಿಂದ ಎರಡು ಲಕ್ಷ ಪ್ರಕರಣ ದೃಢಪಡುತ್ತಿದೆ.. ಡೈಲಿ 3 ಸಾವಿರ ಸೋಂಕಿತರು ಪ್ರಾಣ ಕಳೆದುಕೊಳ್ತಿದ್ದಾರೆ. ಇದರ ಪರಿಣಾಮ ಅಮೆರಿಕದಲ್ಲೀಗ ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿ ದಾಟಿ ಹೋಗಿದೆ. ಹೊಸ ವರ್ಷದ ಮೊದಲ ದಿನವೇ ಈ ರೆಕಾರ್ಡ್ ಬರೆದಿದೆ ವಿಶ್ವದ ದೊಡ್ಡಣ್ಣ. ಈ ನಂಬರ್ಸ್ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ​ ಭಾರತಕ್ಕಿಂತ ಎರಡು ಪಟ್ಟು ಹೆಚ್ಚು. ಭಾರತದಲ್ಲಿ 1 ಕೋಟಿ ಜನರಿಗೆ ಸೋಂಕು ತಗುಲಿದೆ. ಆದ್ರೆ ಭಾರತಕ್ಕೆ ಹೋಲಿಸಿದ್ರೆ ಅಮೆರಿಕದ ಜನಸಂಖ್ಯೆ ಕಮ್ಮಿ. ಅಲ್ಲಿನ ಪಾಪುಲೇಷನ್ 32 ಕೋಟಿ. ಭಾರತದ್ದು 135 ಕೋಟಿ.. ಹಾಲಿಡೇ ಸೀಸನ್​, ಕಾರ್ಯಕ್ರಮಗಳಲ್ಲಿ ಜನ ಒಂದೆಡೆ ಸೇರೋದು, ಹೆಚ್ಚೆಚ್ಚು ವಿದೇಶಿ ಪ್ರಯಾಣವೇ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಅಂತ ಹೇಳಲಾಗ್ತಿದೆ. ಮತ್ತೊಂದುಕಡೆ ಲಸಿಕೆ ಹಾಕುವ ಕಾರ್ಯಕ್ರಮ ಕೂಡ ನಡೀತಿದೆ. 2020ರ ಒಳಗೆ 2 ಕೋಟಿ ಅಮೆರಿಕನ್ನರಿಗೆ ಲಸಿಕೆ ಹಾಕಬೇಕು ಅನ್ನೋ ಗುರಿ ಇಟ್ಟುಕೊಂಡಿದ್ರು ಟ್ರಂಪ್. ಆದ್ರೆ ಡಿಸೆಂಬರ್ 31ರವರೆಗೆ 28 ಲಕ್ಷ ಜನರಿಗೆ ಮಾತ್ರ ಲಸಿಕೆ ಹಾಕಲಾಗಿದೆ.

-masthmagaa.com

Contact Us for Advertisement

Leave a Reply