ಚುನಾವಣೆ ತನಿಖೆ ಬಗ್ಗೆ ಅಮೆರಿಕದ ಮಾತಿಗೆ ಕ್ಯಾರೆ ಅನ್ನದ ಪಾಕ್‌!

masthmagaa.com:

ಪಾಕಿಸ್ತಾನದ ಚುನಾವಣೆಯಲ್ಲಿ ಅಕ್ರಮ ನಡೆದಿರೊ ವಿಚಾರವಾಗಿ ತನಿಖೆ ನಡೆಸ್ಬೇಕು ಅಂತೇಳಿದ್ದ ಅಮೆರಿಕದ ಮಾತನ್ನ ಇದೀಗ ಪಾಕಿಸ್ತಾನ ತಳ್ಳಿ ಹಾಕಿದೆ. ಅಲ್ದೇ ನಮ್ಮ ದೇಶದಲ್ಲಿನ ಚುನಾವಣೆ ಬಗ್ಗೆ ಅಮೆರಿಕ ತಪ್ಪು ಕಲ್ಪನೆ ಹೊಂದಿದೆ ಅಂತ ಪಾಕ್‌ನ ವಿದೇಶಾಂಗ ವಕ್ತಾರರಾದ ಮುಮ್ತಾಜ್‌ ಜಹ್ರಾ ಬಲೂಚ್‌ ಅಮೆರಿಕಗೆ ಟಾಂಗ್‌ ಕೊಟ್ಟಿದ್ದಾರೆ. ಜೊತೆಗೆ ಅಮೆರಿಕ, ಪಾಕ್‌ನ ರಾಜಕೀಯ ಪರಿಸ್ಥಿತಿಗಳ ಬಗ್ಗೆಯೂ ತಪ್ಪಾಗಿ ತಿಳ್ಕೊಂಡಿದೆ. ಹಾಗೂ ಈ ತಪ್ಪು ತಿಳುವಳಿಕೆ ಸಂಬಂಧ ಅಮೆರಿಕ ಪಾಕ್‌ ಜೊತೆ ಮಾತುಕತೆಗೆ ಮುಂದಾಗ್ಬೇಕು ಹಾಗೂ ಉಭಯ ದೇಶಗಳ ನಡಡುವಿನ ಪ್ರಾದೇಶಿಕ ಸಹಕಾರದ ವೃದ್ದಿಯನ್ನೆ ನಾವು ಬಯಸ್ತೇವೆ ಅಂತೇಳಿದ್ದಾರೆ. ಅಂದ್ಹಾಗೆ ಪಾಕ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತೇಳಿ ಭಾರಿ ಆರೋಪ ಕೇಳಿ ಬಂದಿತ್ತು. ಹಾಗಾಗಿ ಈ ವಿಚಾರದಲ್ಲಿ ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ಅಮೆರಿಕ ಮಧ್ಯ ಪ್ರವೇಶ ಮಾಡ್ಬೇಕು ಅಂತ ಒತ್ತಾಯಿಸಿದ್ರು. ಇದ್ರಿಂದ ಅಮೆರಿಕ ಇತ್ತೀಚಿಗೆ ಚುನಾವಣೆ ಬಗ್ಗೆ ತನಿಖೆ ನಡೆಸಿ. ಇಲ್ದಿದ್ರೆ ದ್ವಿಪಕ್ಷೀಯ ಸಂಬಂಧದ ಮೇಲೆ ಇದು ಪರಿಣಾಮ ಬೀಳುತ್ತೆ ಅಂತ ಪಾಕಿಸ್ತಾನಕ್ಕೆ ಸೂಚನೆ ನೀಡಿತ್ತು. ಆದ್ರೆ ಅಮೆರಿಕದ ಮಾತಿಗೆ ಪಾಕ್‌ ಡೊಂಟ್‌ ಕೇರ್‌ ಅಂದಿದೆ.

-masthmagaa.com

Contact Us for Advertisement

Leave a Reply