ಶುದ್ಧ ಸಸ್ಯಹಾರ ಸೇವಿಸಿ ಡಯಟ್‌ ಇನ್‌ಫ್ಲುಯೆನ್ಸರ್‌ ಸಾವು?

masthmagaa.com:

ವೇಗನ್‌ ಡಯಟ್‌ ಅಂದ್ರೆ ಪ್ರಾಣಿಗಳಿಂದ ಉತ್ಪತ್ತಿಯಾಗುವ ಆಹಾರವನ್ನ ಸೇವಿಸದೆ ಶುದ್ಧ ಸಸ್ಯಹಾರ ಫಾಲೋ ಮಾಡ್ತಿದ್ದ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಒಬ್ರು ಸಾವನ್ನಪ್ಪಿದ್ದಾರೆ. ರಷ್ಯಾ ಮೂಲದ 39 ವರ್ಷದ ಝನ್ನಾ ಸ್ಯಾಮ್ಸೊನೋವಾ ಶುದ್ಧ ಸಸ್ಯಹಾರ ಡಯಟ್‌ನ್ನ ಸುಮಾರು 10 ವರ್ಷದಿಂದ ಫಾಲೋ ಮಾಡ್ತಿದ್ರು ಅಂತ ತಿಳಿದು ಬಂದಿದೆ. ಜೊತೆಗೆ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲೂ ವಿಡಿಯೋ ಹಾಗೂ ಫೋಟೊಗಳನ್ನ ಅಪ್‌ಲೋಡ್‌ ಮಾಡೋ ಮೂಲಕ ಪ್ರಮೋಟ್‌ ಮಾಡ್ತಿದ್ರು. ಆದ್ರೆ ಈಗ ಹಲವು ಆರೋಗ್ಯ ಸಮಸ್ಯೆಯಿಂದ ಆಕೆ ಮೃತಪಟ್ಟಿದ್ದು, ಇದಕ್ಕೆ ಕೇವಲ ಸಸ್ಯಹಾರವನ್ನ ಸೇವಿಸಿದ್ದೇ ಕಾರಣ ಎನ್ನಲಾಗಿದೆ. ಈ ಬಗ್ಗೆ ಮಾತಾಡಿರುವ ಸ್ಯಾಮ್ಸೊನೋವಾಳ ತಾಯಿ, ತಮ್ಮ ಮಗಳು ಕಾಲರಾ ರೋಗದಿಂದ ಮೃತಪಟ್ಟಿದ್ದು, ಎಲ್ಲಾ ಸಸ್ಯಹಾರಿ ಆಹಾರದಿಂದ ಆಕೆ ತುಂಬಾ ಒತ್ತಡದಲ್ಲಿದ್ದಳು ಹಾಗೂ ದೇಹದಲ್ಲಿ ಶಕ್ತಿ ಇರಲಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply