ಪಾಕ್ ವಿರುದ್ಧ ಸೋಲು: ಶಮಿಗೆ ನೆಟ್ಟಿಗರಿಂದ ಟೀಕೆಗಳ ಸುರಿಮಳೆ!

masthmagaa.com:

ಪಾಕಿಸ್ತಾನ ವಿರುದ್ಧದ ಟಿ20 ಮ್ಯಾಚ್ ನಲ್ಲಿ ಬೌಲಿಂಗ್ ನಲ್ಲಿ ದುಬಾರಿಯಾಗಿದ್ದಕ್ಕೆ ಕೆಲ ಅವಿವೇಕಿಗಳು ಭಾರತದ ವೇಗಿ ಮಹಮದ್ ಶಮಿ ವಿರುದ್ಧ ದಾಳಿ ಮಾಡಿದ್ದಾರೆ. ಇನ್​​ಸ್ಟಾಗ್ರಾಂ, ಟ್ವಿಟರ್ ಈ ಥರ ಎಲ್ಲಾ ಕಡೆ ಶಮಿಯ ದೇಶ ನಿಷ್ಟೆಯನ್ನೇ ಪ್ರಶ್ನೆ ಮಾಡಿದ್ದಾರೆ. ಅವರ ತಾಯಿ ಕುಟುಂಬದವರಿಗೆಲ್ಲ ಬೈದು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಪಾಕಿಸ್ತಾನವೂ ಸೇರಿದಂತೆ ಬಲಾಡ್ಯ ತಂಡಗಳ ವಿರುದ್ಧ ಇದೇ ಶಮಿ ಅದ್ಭುತ ಬೌಲಿಂಗ್ ಮಾಡಿ ಗೆಲುವು ತಂದುಕೊಟ್ಟಿದ್ದನ್ನ ಮರೆತು ಬಾಯಿಗೆ ಬಂದಹಾಗೆ ಟೀಕೆ ಮಾಡಿದ್ದಾರೆ.

ಶಮಿ ಭಾರತಕ್ಕೆ 79 ಒಂಡೇ ಆಡಿದ್ದಾರೆ. ಅದರಲ್ಲಿ 148 ವಿಕೆಟ್ ಪಡೆದಿದ್ದಾರೆ. ಅದರಲ್ಲೂ 96 ವಿಕೆಟ್ ಭಾರತ ಗೆದ್ದಾಗ ಬಂದಿವೆ. ಶಮಿ ಇದುವರೆಗೆ ಇದೇ ಪಾಕಿಸ್ತಾನ ವಿರುದ್ಧ ಮೂರು ಒಂಡೇ ಮ್ಯಾಚಲ್ಲಿ ಆಡಿದ್ದಾರೆ. ಅದರಲ್ಲಿ 5 ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಯೂನಿಸ್ ಖಾನ್, ಮಿಸ್ಬಾ ಉಲ್ ಹಕ್, ಶಾಹಿದ್ ಅಫ್ರಿದಿಯಂತ ಟಾಪ್ ಬ್ಯಾಟರ್ಗಳ ವಿಕೆಟ್ಟೇ. ನಿನ್ನೆ ಮ್ಯಾಚಲ್ಲಿ ಬರೀ ಶಮಿ ಮಾತ್ರ ಫೇಲ್ ಆಗಿದ್ದಲ್ಲ. ರೋಹಿತ್ ಶರ್ಮಾ ಕುಡ ಡಕ್ ಔಟ್ ಆಗಿದ್ರು. ಇಡೀ ಟೀಮ್ ಪಾಕಿಸ್ತಾನದ ಮೇಲೆ ಗೆಲ್ಲೋ ಥರ ಆಡಲೇ ಇಲ್ಲ. ಶಮಿ 18ನೇ ಓವರ್ ಮಾಡಲು ಬಂದಾಗ ಅಂತ ದೊಡ್ಡ ಹೋಪ್ ಏನು ಉಳಿದಿರಲಿಲ್ಲ. ಒಂದೂ ವಿಕೆಟ್ ಕಳೆದುಕೊಳ್ಳದೆ ಪಾಕ್ ಗೆಲುವಿನ ಹೊಸ್ತಿಲಿಗೆ ಬಂದಾಗಿತ್ತು. ಗ್ರಹಚಾರಕ್ಕೆ ಶಮಿಯ ಅದೊಂದೇ ಓವರ್ನಲ್ಲಿ 17 ರನ್ ಹೋಯ್ತು. ಅದಕ್ಕೇ ದೇಶದ್ರೋಹಿಯಂತೆ ಬಿಂಬಿಸಿದ್ರೆ ಈ ದೇಶದ ಆರೋಗ್ಯಕ್ಕೆ ಅದಕ್ಕಿಂತ ಡ್ಯಾಮೇಜ್ ಬೇರೆ ಇಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರೋ ಹರ್ಬಜನ್ ಸಿಂಗ್, ಯಜುವೇಂದ್ರ ಚಹಲ್, ವಿರೇಂದ್ರ ಸೆಹ್ವಾಗ್ ಸೇರಿ ಹಲವರು ಮಹಮದ್ ಶಮಿಗೆ ಬೆಂಬಲ ಸೂಚಿಸಿದ್ದಾರೆ.

ದೇಶದ ಒಳಗಿರೋ ಕೆಲವೇ ಕೆಲವು ವಿಕೃತ ಮನಸ್ಸುಗಳಿಂದ ಇಂತಾ ಘಟನೆಗಳಿಗೆ ಮತ್ತಷ್ಟು ಪ್ರಚೋದನೆ ಸಿಗ್ತಿದೆ. ಭಾರತ ಪಾಕ್ ವಿರುದ್ಧ ಸೋತಾಗ ಪಟಾಕಿ ಹೊಡೆಯೋದು, ಸಂಭ್ರಮಾಚರಣೆ ಮಾಡೋದು ಇತ್ಯಾದಿ ಮಾಡ್ತಾರೆ. ಪಂಜಾಬ್ ನಲ್ಲೂ ಇಂಥದ್ದೇ ಒಂದು ದೊಡ್ಡ ಗಲಾಟೆಯಾಗಿದೆ. ಪಂಜಾಬ್ ನ ಸಂಗ್ರೂರ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಕೆಲ ಕಾಶ್ಮಿರ ಮೂಲದ ಯುವಕರು ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ರೊಚ್ಚಿಗೆದ್ದ ಉಳಿದ ಹುಡುಗರು ಗಲಾಟೆ ಮಾಡಿಕೊಂಡಿದ್ದಾರೆ. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply