ಪುಟಿನ್‌ ಮುಂದಿನ ನಡೆ ಏನು? ರಷ್ಯಾ ಟುಡೇ ಸಂಪಾದಕಿ ಹೇಳಿದ್ರು ನೋಡಿ!

masthmagaa.com:

ಸದ್ಯದ್ರಲ್ಲೇ ಪುಟಿನ್, ಉಕ್ರೇನ್‌ಗೆ ಬೆಂಬಲ ನೀಡುತ್ತಿರುವ ನ್ಯಾಟೋ ದೇಶಗಳ ವಿರುದ್ಧ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಿದ್ದಾರೆ ಅಂತ ರಷ್ಯಾದ ಮುಖ್ಯ ಸುದ್ದಿವಾಹಿನಿ, ರಷ್ಯಾ ಟುಡೇ ಪ್ರಧಾನ ಸಂಪಾದಕಿ ಮಾರ್ಗರಿಟಾ ಸಿಮೊನಿಯನ್ ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ನೀಡೋದನ್ನ ಪುಟಿನ್‌ “ಯುದ್ಧದಲ್ಲಿ ಭಾಗವಹಿಸೋದು” ಅಂತ ಭಾವಿಸಿದ್ದಾರೆ. ಒಂದು ದಿನ ಬೆಳಗ್ಗೆ ನಾವು ಎದ್ದಾಗ “ಕಳೆದ ರಾತ್ರಿ ಪುಟಿನ್ ಪಾಶ್ಚಿಮಾತ್ಯ ದೇಶಗಳಿಗೆ ಅಲ್ಟಿಮ್ಯಾಟಂ ಅಂದ್ರೆ ಅಂತಿಮ ಎಚ್ಚರಿಕೆಯನ್ನ ಘೋಷಿಸಿದ್ದಾರೆ. ಯಾವುದಾದ್ರು ದೇಶದ ವಾಯುನೆಲೆಗಳಿಂದ ಹೊರಟ F-16 ಜೆಟ್‌ ಯುದ್ಧವಿಮಾನಗಳು ರಷ್ಯಾದ ಮೇಲೆ ದಾಳಿ ಮಾಡೋದು ಮುಂದುವರಿಸಿದರೆ, ಅಥವಾ ಯಾವುದಾದ್ರು ದೇಶದ ಬಂದರಿನಿಂದ ಯುದ್ದೋಪಕರಣಗಳು ರವಾನೆಯಾದ್ರೆ, ಅಂತಹ ದೇಶಗಳ ವಾಯುನೆಲೆ ಮತ್ತು ಬಂದರುಗಳು ರಷ್ಯಾದ ವಾರ್‌ ಟಾರ್ಗೆಟ್‌ ಆಗಿರುತ್ವೆ” ಅನ್ನೋ ಸುದ್ದಿ ಓದ್ತಾ ಎದ್ದೇಳ್ಬೇಕಾಗುತ್ತೆ ಅಂತ ಮಾರ್ಗರಿಟಾ ಹೇಳಿದ್ದಾರೆ. ರಷ್ಯಾ ಟುಡೇಯ ಸಂಪಾದಕಿ ಈ ರೀತಿ ಹೇಳಿರೋದನ್ನ ಉಕ್ರೇನ್‌ ಆಂತರಿಕ ಸಚಿವರ ಸಲಹೆಗಾರ ಆ್ಯಂಟನ್‌ ಗೆರಾಶ್ಚೆಂಕೋ ಟ್ವಿಟರ್ನಲ್ಲಿ ಶೇರ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply