ಯುಕ್ರೇನ್‌ ಬದ್ಲು ಇರಾಕ್‌ ದಾಳಿ ಅಂದ ಜಾರ್ಜ್‌ ಬುಷ್‌!

masthmagaa.com:

ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲೂ ಬುಷ್‌ ಭಾಷಣ ಒಂದ್ರಲ್ಲಿ ಯುಕ್ರೇನ್‌ ದಾಳಿ ಅನ್ನೋ ಬದ್ಲು ಇರಾಕ್‌ ದಾಳಿ ಅಂತ ಹೇಳಿದ್ದಾರೆ. ಯುಕ್ರೇನ್‌ ಮೇಲೆ ಬರ್ಬರ ದಾಳಿ ಮಾಡೋ ನಿರ್ಧಾರ ಒಬ್ಬ ವ್ಯಕ್ತಿಯದ್ದಾಗಿತ್ತು ಅಂತ ಹೇಳುವಲ್ಲಿ ಯುಕ್ರೇನ್‌ ಬದ್ಲು ಇರಾಕ್‌ ಅಂತ ಹೇಳಿದ್ದಾರೆ. ಆಗ ಇಡೀ ಸಭೆ ಸ್ತಬ್ಧವಾಗಿದೆ. ನಂತ್ರ ಮುಂದುವರೆದು ನನ್ನ ಅರ್ಥ ಯುಕ್ರೇನ್‌ ಆಗಿತ್ತು. 75 ವರ್ಷ ವಯಸ್ಸಾಗಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ 2003ರಲ್ಲಿ ಜಾರ್ಜ್‌ ಬುಷ್‌ ಅಧ್ಯಕ್ಷರಿರೋವಾಗ್ಲೇ ಅಮೆರಿಕ ಇರಾಕ್‌ ಮೇಲೆ ಆಕ್ರಮಣ ಮಾಡಿತ್ತು.

-masthmagaa.com

Contact Us for Advertisement

Leave a Reply