ರಾಮಸೇತು ಜಾಗಕ್ಕೆ ಭದ್ರತೆಯೊಂದಿಗೆ ಬಂದ ಚೀನೀ ರಾಯಭಾರಿ!

masthmagaa.com:

ಶ್ರೀಲಂಕಾದಲ್ಲಿ ಚೀನಾದ ರಾಯಭಾರಿಯಾಗಿರೋ ಖೀ ಜೆನ್​ಹೋಂಗ್​ ಭಾರಿ ಭದ್ರತೆಯೊಂದಿಗೆ ಆಡಮ್ಸ್​ ಬ್ರಿಡ್ಜ್ ಅಂದ್ರೆ ರಾಮಸೇತುಗೆ ಭೇಟಿ ನೀಡಿದ್ದಾರೆ. ಕ್ಯೂಯಿಜೆನ್​ಹೋಂಗ್ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿರೋ ಶ್ರೀಲಂಕಾದ ಉತ್ತರ ಭಾಗಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ರು. ಈ ವೇಳೆ ಭಾರಿ ಭದ್ರತೆ ನಡುವೆ ರಾಮಸೇತು ತನಕ ಬಂದು, ನೋಡ್ಕೊಂಡು ಹೋಗಿದ್ದಾರೆ. ಇದು ಶ್ರೀಲಂಕಾದ ವಾಯುವ್ಯ ತೀರ ಮತ್ತು ಭಾರತದ ದಕ್ಷಿಣ ತೀರಕ್ಕೆ ಹತ್ತಿರದಲ್ಲಿರೋ ರಾಮೇಶ್ವರಂನ ನಡುವೆ ಇದೆ. ಕಲ್ಲುಗಳಿಂದ ನಿರ್ಮಾಣವಾಗಿರೋ ಈ ಸೇತುವೆ ಸುಮಾರು 48 ಕಿಲೋಮೀಟರ್​​ನಷ್ಟು ಉದ್ದವಿದೆ. ಶ್ರೀಲಂಕಾ ದಡದಿಂದ 17 ಕಿಲೋಮೀಟರ್ ದೂರದಲ್ಲಿರೋ ಈ ಸೇತುವೆಯ ಭಾಗಕ್ಕೆ ಕ್ಯೂಯಿ ಜೆನ್​ಹೋಂಗ್ ಭೇಟಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚೀನಾ ರಾಯಭಾರಿ ಶ್ರೀಲಂಕಾದ ಉತ್ತರದಲ್ಲಿರೋ ಜಾಫ್ನಾ ಪ್ರದೇಶಕ್ಕೆ ನೀಡಿರೋ ಮೊದಲ ಭೇಟಿ ಇದಾಗಿದೆ. ಇತ್ತೀಚೆಗಷ್ಟೇ ಈ ಭಾಗದಲ್ಲಿ ಚೀನಾ ಹೈಬ್ರಿಡ್ ಎನರ್ಜಿ ಸಿಸ್ಟಂ ಯೋಜನೆಯನ್ನು ಭಾರತದ ವಿರೋಧದ ಬಳಿಕ ಕೈಬಿಟ್ಟಿತ್ತು. ಯಾಕಂದ್ರೆ ಭಾರತಕ್ಕೆ ಹತ್ತಿರದಲ್ಲಿರೋ ಶ್ರೀಲಂಕಾದ ದ್ವೀಪಗಳಲ್ಲಿ ಈ ಯೋಜನೆ ಜಾರಿಗೊಳಿಸಲು ಚೀನಾ ಪ್ಲಾನ್ ಮಾಡ್ಕೊಂಡಿತ್ತು. ಅದ್ರ ಬೆನ್ನಲ್ಲೇ ಚೀನೀ ರಾಯಭಾರಿ ರಾಮಸೇತು ತನಕ ಬಂದು ಹೋಗಿದ್ದಾರೆ. ಇದು ಬರೀ ಪ್ರವಾಸೀಯ ಭೇಟಿನಾ..? ಅಥವಾ ಚೀನಾ ಒಳಗಿಂದೊಳಗೆ ಏನಾದ್ರೂ ಪ್ಲಾನ್ ಮಾಡ್ಕೊಳ್ತಿದ್ಯಾ ಅನ್ನೋ ಅನುಮಾನ ಮೂಡ್ತಿದೆ.

-masthmagaa.com

Contact Us for Advertisement

Leave a Reply