ಪಾಕಿಸ್ತಾನದಲ್ಲಿ ಇನ್ನೂ ಹೋಗಿಲ್ಲ ಪೊಲಿಯೋ ವೈರಸ್!

masthmagaa.com:

ಜಗತ್ತಲ್ಲಿ ಮತ್ತೊಮ್ಮೆ ಕೊವಿಡ್ ವೈರಸ್‌ ಭೀತಿ ಎದ್ದಿದ್ರೆ ಈ ಕಡೆ ಪಾಕ್‌ನಲ್ಲಿ ಮಾತ್ರ ಅಪಾಯಕಾರಿ ಪೊಲಿಯೋ ವೈರಸ್‌ ಆತಂಕ ಹುಟ್ಟಿಸಿದೆ. ಪಾಕ್‌ನ ಕರಾಚಿ ಮತ್ತು ಚಮನ್‌ ಜಿಲ್ಲೆಯಲ್ಲಿ ಈ ವೈರಸ್‌ ಕಂಡು ಬಂದಿದೆ. ಚರಂಡಿ ನೀರಿನಿಂದ ಸ್ಯಾಂಪಲ್‌ ಕಲೆಕ್ಟ್‌ ಮಾಡಲಾಗಿದ್ದು ಅಲ್ಲಿ ಈ ಡೇಂಜರಸ್‌ ವೈರಸ್‌ ಪತ್ತೆಯಾಗಿದೆ ಅಂತ ಪಾಕ್‌ ಆರೋಗ್ಯ ಸಚಿವಾಲಯ ಕನ್ಫರ್ಮ್‌ ಮಾಡಿದೆ. ಇನ್ನು ಈ ಬಗ್ಗೆ ಮಾತನಾಡಿರೋ ಪಾಕ್‌ ಆರೋಗ್ಯ ಸಚಿವಾಲಯದ ವಕ್ತಾರ, ʻಈ ವೈರಸ್‌ನ್ನ ನಿರ್ಮೂಲನೆ ಮಾಡೋಕೆ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನ ಕೈಗೊಳುತ್ತೆ, ಮಕ್ಕಳಿಗೆ ಪೋಲಿಯೋ ವ್ಯಾಕ್ಸಿನ್‌ ಕೊಡಿಸೋದಕ್ಕೆ ಪೋಷಕರಿಗೆ ಸೂಚನೆ ಕೊಟ್ಟಿದ್ದೀವಿ ಅಂತೇಳಿದ್ದಾರೆ. ಅಂದ್ಹಾಗೆ ಪೋಲಿಯೋವೈರಸ್‌ ಅತ್ಯಂತ ಅಪಯಕಾರಿಯಾಗಿದ್ದು, ಒಬ್ರಿಂದೊಬ್ರಿಗೆ ಈಸಿಯಾಗಿ ಸ್ಪ್ರೆಡ್‌ ಆಗೋ ಚಾನ್ಸ್‌ ಇದೆ. ಈ ಖಾಯಿಲೆಯ ಮೊದಲ ಸ್ಟೇಜ್‌ನಲ್ಲಿ ನೆಗಡಿ-ಜ್ವರದಂತಹ ಸಾಮಾನ್ಯ ಲಕ್ಷಣಗಳಿರುತ್ತೆ. ಆದ್ರೆ ಗಂಭೀರ ಪರಿಸ್ಥಿತಿಗೆ ತಲುಪಿದ್ರೆ, ಪಾರ್ಶ್ವ ವಾಯು ಉಂಟಾಗೋ ಚ್ಯಾನ್ಸಸ್‌ ಕೂಡ ಇದೆ. ಈ ಸಾಂಕ್ರಮಿಕ ರೋಗ 5 ವರ್ಷ ಕೆಳಗಿರೋ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತದೆ.

ಜಗತ್ತಿನ ಬಹುತೇಕ ದೇಶಗಳು ಈ ಪೋಲಿಯೋವೈರಸ್‌ ವಿರುದ್ದ ಜಯ ಸಾಧಿಸಿದ್ರೂ. ಪ್ರಪಚಂದಲ್ಲಿ ಎರಡು ದೇಶಗಳಲ್ಲಿ ಮಾತ್ರ ಇದು ಇನ್ನೂ ಜೀವಂತ ಇದೆ. ಒಂದು ಅಫ್ಘಾನಿಸ್ತಾನ ಇನ್ನೊಂದು ಪಾಕಿಸ್ತಾನ..2019ರಲ್ಲಿ ಪಾಕ್‌ನಲ್ಲಿ ಈ ಪೊಲಿಯೋ ವೈರಸ್‌ನ 147 ಕೇಸ್‌ಗಳು ರಿಪೋರ್ಟ್‌ ಆಗಿತ್ತು. 2020ರಲ್ಲಿ 84 ಕೇಸ್‌ಗಳು, 2021ರಲ್ಲಿ 1 ಕೇಸ್‌ ರಿಪೋರ್ಟ್‌ ಆಗಿತ್ತು. ಇನ್ನು 2022ರಲ್ಲಿ ಸ್ವಲ್ಪ ಏರಿಕೆಯಾಗಿ 20 ಕೇಸ್‌ಗಳು ರಿಪೋರ್ಟ್‌ ಆಗಿವೆ. ಪ್ರಸ್ತುತ 2023ರಲ್ಲಿ 1 ಕೇಸ್‌ ಪತ್ತೆಯಾಗಿದೆ. ಇನ್ನು 2014ರಲ್ಲಿ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಪೋಲಿಯೋ ವೈರಸ್‌ ಕೇಸ್‌ಗಳು ಪಾಕ್‌ನಲ್ಲಿ ರಿಪೋರ್ಟ್‌ ಆಗಿತ್ತು. ಭಾರತದ ವಿಚಾರಕ್ಕೆ ಬಂದ್ರೆ, ಮಾರ್ಚ್‌ 27, 2014ರಲ್ಲಿ WHO ಭಾರತವನ್ನ ಪೋಲಿಯೋ ಮುಕ್ತ ದೇಶವನ್ನಾಗಿ ಘೋಷಿಸಿತ್ತು. ಭಾರತದಲ್ಲಿ ಕೊನೆಯ ಪೋಲಿಯೋವೈರಸ್‌ ಕೇಸ್‌ ಪಶ್ಚಿಮ ಬಂಗಾಳದಲ್ಲಿ ಜನವರಿ 13, 2011 ರಂದು ಪತ್ತೆಯಾಗಿತ್ತು.

-masthmagaa.com

Contact Us for Advertisement

Leave a Reply