ಮೃತ ಪತಿಯ ನೆನಪಿಗಾಗಿ ಪುಸ್ತಕ ಬರೆದವಳು ಪೊಲೀಸರ ಅತಿಥಿಯಾಗಿದ್ಯಾಕೆ!

mathmagaa.com:

ಅಮೆರಿಕದ ಕೌರಿ ರಿಚಿನ್ಸ್ ಅನ್ನೊ ಮಹಿಳೆ ತನ್ನ ಪತಿಯ ಮರಣಾನಂತರ ಆತನ ನೆನಪಿಗಾಗಿ ತನ್ನ ಮಕ್ಕಳಿಗಾಗಿ ‘Are You With Me?’ ಹೆಸರಿನ ಪುಸ್ತಕ ಬರೆದಿದ್ದಾಳೆ. ಪತಿಯ ಮರಣದ ನಂತರ ತಾನು ಎದುರಿಸಿದ ನೋವು ಮತ್ತು ಸನ್ನಿವೇಶಗಳ ಕುರಿತು ಈ ಪುಸ್ತಕದಲ್ಲಿ ಬರೆಯಲಾಗಿದೆ. ಈ ಪುಸ್ತಕ ಇತರ ಮಕ್ಕಳಿಗೆ ಗೈಡ್​ ಆಗಿ, ತಮ್ಮ ತಂದೆಯನ್ನು ಕಳೆದುಕೊಂಡ ನಂತರ ಮತ್ತೆ ಸಂತೋಷವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತೆ ಅಂತ ಮಹಿಳೆ ಹೇಳಿಕೊಂಡಿದ್ದಾಳೆ. ಆದ್ರೆ ಇಲ್ಲಿ ಟ್ವಿಸ್ಟ್‌ ಏನಂದ್ರೆ ತನ್ನ ಪತಿಯನ್ನ ಕೊಲೆ ಮಾಡಿದ್ದು ಆಕೆಯೇ ಅಂತ ತಿಳಿದು ಬಂದಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಮದ್ಯದಲ್ಲಿ ನಶಾವಸ್ತು ಸೇರಿಸಿ ನೀಡಿದ್ದಾರೆ. ಇನ್ನು ಮದ್ಯದಲ್ಲಿ ನಶಾ ವಸ್ತುವಿನ ಪ್ರಮಾಣ ಹೆಚ್ಚಿದ್ದ ಕಾರಣ ಆಕೆಯ ಪತಿ ಸಾವನ್ನಪ್ಪಿದ್ದಾರೆ. ಇದೀಗ ಆಕೆಯ ಪತಿಯನ್ನ ತಾನೇ ಕೊಲೆ ಮಾಡಿದ್ದಾಳೆ ಅನ್ನೊ ವಿಷಯ ಪೊಲೀಸರ ತನಿಖೆಯಿಂದ ತಿಳಿದು ಬಂದಿದ್ದು, ಕೌರಿಯನ್ನ ಬಂಧಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply