20 ವರ್ಷದ ಹೊಸ ಟೆನಿಸ್‌ ಕಿಂಗ್‌ ಅಲ್ಕರಝ್‌!

masthmagaa.com:

2023ರ ಪುರುಷರ ವಿಂಬಲ್ಡನ್‌ ಫೈನಲ್‌ ಪಂದ್ಯದಲ್ಲಿ ಟೆನಿಸ್‌ ತಾರೆ ನೊವಾಕ್‌ ಜೊಕೊವಿಕ್‌ರನ್ನ ಸೋಲಿಸುವ ಮೂಲಕ ಸ್ಪೇನ್‌ನ 20 ವರ್ಷದ ಕಾರ್ಲೋಸ್‌ ಅಲ್ಕರಝ್‌ ಅವ್ರು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಟೆನಿಸ್‌ ಲೋಕದ ನೂತನ ಯುವತಾರೆಯಾಗಿ ಕಾರ್ಲೋಸ್‌ ಇತಿಹಾಸ ಸೃಷ್ಟಿಸಿದ್ದಾರೆ. ಇನ್ನು 2002ರಿಂದ ಇಲ್ಲಿಯವರೆಗೆ ಬಿಗ್‌ ಫೋರ್‌ ಅಂತಾನೆ ಕರೆಯುವ ಟೆನಿಸ್‌ ದಿಗ್ಗಜರಾದ ರೋಜರ್‌ ಫೆಡರರ್‌, ರಾಫೆಲ್‌ ನಡಾಲ್‌, ನೊವಾಕ್‌ ಜೊಕೊವಿಕ್‌ ಹಾಗೂ ಆಂಡಿ ಮರ್ರೆ ಬಿಟ್ರೆ ಬೇರೆ ಯಾರೂ ವಿಂಬಲ್ಡನ್‌ ಗೆದ್ದಿರಲಿಲ್ಲ. ಇದೀಗ 21 ವರ್ಷಗಳ ಬಳಿಕ ಮೊದಲ ಬಾರಿಗೆ ಈ 4 ಜನರನ್ನ ಬಿಟ್ಟು ಬೇರೆ ಆಟಗಾರ ವಿಂಬಲ್ಡನ್‌ ಮುಡಿಗೇರಿಸಿಕೊಂಡಿದ್ದು, ಹೊಸ ಎರಾ ಒಂದನ್ನ ಶುರು ಮಾಡಿದ್ದಾರೆ. ಟೆನಿಸ್‌ ಲೆಜೆಂಡ್‌ ವಿರುದ್ಧ ಫೈನಲ್‌ ಆಡಿ ಗೆಲ್ಬೇಕು ಅನ್ನೋ ನನ್ನ ಕನಸು ನನಸಾಗಿದ್ದು, ಅತ್ಯಂತ ಮಹತ್ವದ ಕ್ಷಣ ಅಂತ ಕಾರ್ಲೋಸ್‌ ಸಂತೋಷ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply