ಗಡ್ಡ ಬೋಳ್ಸಂಗಿಲ್ಲ.. ಬೀಡಿ, ಸಿಗರೇಟ್ ಎಳೆಯಂಗಿಲ್ಲ: ತಾಲಿಬಾನಿಗಳ ಆದೇಶ

masthmagaa.com:

ಅಫ್ಘಾನಿಸ್ತಾನದ ಕಂದಹಾರ್​​ನಿಂದ ಭಾರತ ತನ್ನ ರಾಯಭಾರಿ ಅಧಿಕಾರಿಗಳನ್ನು ಕರೆಸಿಕೊಂಡಾಗ ವ್ಯಂಗ್ಯವಾಡಿದ್ದ, ಪಾಕ್ ಬುಡಕ್ಕೆ ಈಗ ಬೆಂಕಿ ಬಿದ್ದಿದೆ. ಕಂದಹಾರ್​​​​​​ ಪ್ರಾಂತ್ಯದ ಪ್ರಮುಖ ನಗರವನ್ನು ವಶಕ್ಕೆ ಪಡೆದಿರೋದಾಗಿ ತಾಲಿಬಾನಿಗಳು ಘೋಷಿಸಿದ್ದಾರೆ. ಕಂದಹಾರ್​​​ನ ಸ್ಪಿನ್ ಬೋಲ್ಡಾಕ್​​ ಅನ್ನೋ ಭಾಗ ಪಾಕಿಸ್ತಾನದ ಬಲೂಚಿಸ್ತಾನಕ್ಕೆ ಅಂಟಿಕೊಂಡಿದ್ದು, ಆಫ್ಘನ್ನರು ಗಡಿ ನುಸುಳೋದು ಕೂಡ ಇದೇ ಭಾಗದಲ್ಲಿ. ಆದ್ರೀಗ ಆ ನಗರವನ್ನು ತಾಲಿಬಾನಿಗಳು ಕಂಟ್ರೋಲ್​ಗೆ ತಗೊಂಡಿದ್ದು, ಆ ಭಾಗದ ಆಫ್ಗನ್ನರು ಹೆಚ್ಚಿನ ಸಂಖ್ಯೆಯಲ್ಲಿ ಬಲೂಚಿಸ್ಥಾನಕ್ಕೆ ಓಡಿಬರುವ ಆತಂಕ ಎದುರಾಗಿದೆ. ಹೀಗಾಗಿ ಪಾಕಿಸ್ತಾನ ಈಗ ಸ್ಪಿನ್ ಬೋಲ್ಡಾಕ್ ಮತ್ತು ಚಮನ್ ಗಡಿಯನ್ನು ಕಂಪ್ಲೀಟಾಗಿ ಸೀಲ್​​​ ಮಾಡಿದೆ. ಈ ಭಾಗದಲ್ಲಿ ಎಲ್ಲಾ ರೀತಿಯ ವ್ಯಾಪಾರ ವ್ಯವಹಾರ ಮತ್ತು ಪ್ರಯಾಣವನ್ನು ನಿರ್ಬಂಧಿಸಿದೆ. ಇನ್ನು ತಾವು ಗೆದ್ದಿರೋ ಉತ್ತರ ಅಫ್ಘಾನಿಸ್ಥಾನದ ಜಿಲ್ಲೆಗಳಲ್ಲಿ ತಾಲಿಬಾನಿಗಳು ಹೊಸ ಫರ್ಮಾನು ಹೊರಡಿಸಿದ್ಧಾರೆ. ಮಹಿಳೆಯರು ಒಬ್ಬೊಬ್ಬರೇ ಹೊರಗೆ ಬರಂಗಿಲ್ಲ. ಪುರುಷರು ಗಡ್ಡ ಬೋಳಿಸಂಗಿಲ್ಲ. ಬೀಡಿ, ಸಿಗರೇಟ್ ಎಳೆಯಂಗಿಲ್ಲ ಅಂತ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಯಾರಾದ್ರೂ ರೂಲ್ಸ್ ಬ್ರೇಕ್ ಮಾಡಿ ತಗಲಾಕ್ಕೊಂಡ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಅಂತ ತಾಲಿಬಾನಿಗಳು ಎಚ್ಚರಿಸಿದ್ದಾರೆ ಅಂತ ಅಲ್ಲಿನ ಸ್ಥಳೀಯರು ಹೇಳಿದ್ದಾರೆ. ಆದ್ರೆ ತಾಲಿಬಾನಿಗಳು ಮಾತ್ರ ಇದೆಲ್ಲಾ ಸುಳ್ಳು.. ನಾವು ಆ ರೀತಿಯ ಯಾವುದೇ ಆದೇಶ ನೀಡಿಲ್ಲ ಅಂತ ಹೇಳಿದ್ದಾರೆ. ಅಂದಹಾಗೆ ತಾಲಿಬಾನಿಗಳು 1996ರಿಂದ 2001ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ್ರು. ಈ ಅವಧಿಯಲ್ಲಿ ಮಹಿಳೆಯರು ಮನೆಯೊಳಗೆ ಇರಲು ಆದೇಶ ನೀಡಲಾಗಿತ್ತು. ಒಂದು ವೇಳೆ ಮಹಿಳೆಯರು ಹೊರಗೆ ಬರಬೇಕಾದ್ರೂ ಅವರ ಪತಿ, ತಮ್ಮ, ತಂದೆ.. ಹೀಗೆ ಯಾರಾದ್ರೂ ಒಬ್ಬರು ಸಂಬಂಧಿಕ ಪುರುಷರು ಜೊತೆಯಲ್ಲಿ ಇರಲೇಬೇಕು ಅಂತ ರೂಲ್ಸ್ ಮಾಡಲಾಗಿತ್ತು. ಹುಡುಗಿಯರಿಗೆ ಶಾಲೆಗೆ ಹೋಗೋಕೂ ಪರ್ಮಿಷನ್ ಇರಲಿಲ್ಲ. ಒಂದು ವೇಳೆ ವೇಷ್ಯಾವಾಟಿಕೆಯಂತ ಕೆಲ್ಸ ಮಾಡಿ ಸಿಕ್ಕಾಕ್ಕೊಂಡ್ರೆ ಜೀವಾನೇ ತೆಗೆದು ಬಿಡ್ತಿದ್ರು ತಾಲಿಬಾನಿಗಳು. ಮತ್ತೊಂದ್ಕಡೆ ಪಾಕಿಸ್ತಾನ ಈಗೀಗ ಸ್ವಲ್ಪ ಮೆಚ್ಯೂರ್ ಆಗಿ ವರ್ತಿಸೋಕೆ ಶುರು ಮಾಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಸಿಂಧ್ ಪ್ರಾಂತ್ಯದ ಕರಾಚಿಯಲ್ಲಿ ಮಹಿಳಾ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

-masthmagaa.com

Contact Us for Advertisement

Leave a Reply