ಪಾಕ್‌ ನೂತನ ಅಧ್ಯಕ್ಷನಿಗೆ ಶುಭಕೋರಿದ ಚೀನಾ ಅಧ್ಯಕ್ಷ ಜಿನ್‌ಪಿಂಗ್‌!

masthmagaa.com:

ಪಾಕ್‌ನ ಹೊಸ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಪ್ರಮಾಣ ವಚನ ಸ್ವೀಕರಿಸ್ತಿದ್ಹಾಗೆ..ಅತ್ತ ಚೀನಾ ಶುಭಕೋರಿದೆ. ʻಚೀನಾ ಮತ್ತು ಪಾಕಿಸ್ತಾನ ಒಂದೊಳ್ಳೆ ನೇಬರ್ಸ್‌, ಫ್ರೆಂಡ್ಸ್‌, ಪಾರ್ಟನರ್ಸ್‌ ಮತ್ತು ಬ್ರದರ್ಸ್‌ʼ ಅಂತ ಚೀನಾ ಅಧ್ಯಕ್ಷ ಜಿನ್‌ ಪಿಂಗ್‌ ಹೇಳಿದ್ದಾರೆ. ಅಲ್ದೇ, ʻಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳು ಕ್ಲೋಸ್‌ ಆಗಿ ಉನ್ನತ ಮಟ್ಟದ ಸಂಬಂಧವನ್ನ ಮೆಂಟೇನ್‌ ಮಾಡ್ತಿವೆ. ಎರಡೂ ದೇಶಗಳು ಪ್ರತೀ ಕ್ಷೇತ್ರದಲ್ಲೂ ಒಬ್ರಿಗೊಬ್ರು ಸಪೋರ್ಟ್‌ ಮಾಡಿವೆ. ಚೀನಾ-ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್‌ (CPEC) ನಿರ್ಮಾಣದಲ್ಲಿ ಒಳ್ಳೆ ಫಲಿತಾಂಶವನ್ನ ನಾವು ಸಾಧಿಸಿದ್ದೇವೆ..ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಸಿದೆʼ ಅಂತ ಪಾಕ್‌ಗೆ ಸಂದೇಶ ಕಳಿಸಿದ್ದಾರೆ.

-masthmagaa.com

Contact Us for Advertisement

Leave a Reply