ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್‌ ಸಿನ್ಹಾ..!

masthmagaa.com:

ರಾಷ್ಟ್ರಪತಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇಶದ ರಾಜಕೀಯ ಗರಿಗೆದರಿದೆ. ತೀವ್ರ ಹಣಾಹಣಿಯಲ್ಲಿರೋ BJP ಹಾಗೂ TMC ನೇತೃತ್ವದ ಪ್ರತಿಪಕ್ಷಗಳ ಬಣ ಅಭ್ಯರ್ಥಿಯ ಹುಡುಕಾಟವನ್ನ ಚುರುಗೊಳಿಸಿವೆ. ಪ್ರತಿಪಕ್ಷಗಳ ವಲಯದಿಂದ ಇದುವರೆಗೂ ನಾಲ್ಕೈದು ಹೆಸರು ಕೇಳಿಬಂದಿದ್ವು. ಆದ್ರೆ ಈಗ ಹಿರಿಯ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಯಶ್ವಂತ್‌ ಸಿನ್ಹಾ ಪ್ರತಿಪಕ್ಷಗಳ ಪರವಾಗಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಇಂದು ತಮ್ಮ ಪಕ್ಷ TMCಯ ಸದಸ್ಯತ್ವಕ್ಕೆ ರಾಜೀನಾಮೆ ಕೂಡ ನೀಡಿದ್ರು. ಯಾಕಂದ್ರೆ ಯಾವುದೇ ಪಕ್ಷದಿಂದ ರಾಷ್ಟ್ರಪತಿ ಅಭ್ಯರ್ಥಿಯಾಗ್ಬೇಕಾದ್ರೆ ಅವರು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡ್ಬೇಕು ಅಂತ ಕೆಲ ಪಕ್ಷಗಳು ಒತ್ತಾಯ ಮಾಡಿದ್ವು. ಹೀಗಾಗಿ ರಾಜೀನಾಮೆ ನೀಡಿದ್ದಾರೆ. ಇನ್ನು 84 ವರ್ಷದ ಸಿನ್ಹಾ 2018ರಲ್ಲಿ ಬಿಜೆಪಿಯಿಂದ TMCಗೆ ಬಂದು ಮಮತಾ ಗುಂಪಿನಲ್ಲಿ ಸೇರ್ಪಡೆಯಾಗಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ʻಸಿನ್ಹಾ ಅವರು ಅತ್ಯಂತ ಗೌರವಯುಕ್ತ ವ್ಯಕ್ತಿ. ಕುಶಾಗ್ರಮತಿ ಕೂಡ ಹೌದು. ಖಂಡಿತವಾಗಿ ನಮ್ಮ ದೇಶದ ಗೌರವವನ್ನ ಎತ್ತಿ ಹಿಡೀತಾರೆ ಅಂತ ಹೊಗಳಿದ್ರು. ಇತ್ತ ಬಿಜೆಪಿಯಲ್ಲೂ ಕೂಡ ಒಳಗೊಳಗೇ ಅಭ್ಯರ್ಥಿಯ ಹುಡುಕಾಟಕ್ಕೆ ವೇಗ ಸಿಕ್ಕಿದ್ದು ಸದ್ಯ ಬಿಜೆಪಿ ವಲಯದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡುಅವರ ಹೆಸರು ಮುಂಚೂಣಿಯಲ್ಲಿದೆ.

-masthmagaa.com

Contact Us for Advertisement

Leave a Reply