ಬಾಬಾ ರಾಮ್‌ದೇವ್‌-ಓವೈಸಿ ಜಟಾಪಟಿ: ಉಲ್ಟಾ ಹೊಡೆದ ಬಾಬಾ

masthmagaa.com:

ಯೋಗ ಗುರು ಬಾಬಾ ರಾಮದೇವ್‌ ಹಿಂದುಳಿದ ವರ್ಗಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ, ಅನಂತ್ರ ಮೆಲ್ಲಗೆ ಜಾರಿಕೊಳ್ಳೋ ಪ್ರಯತ್ನ ಮಾಡಿದ್ದಾರೆ. ಕಾರ್ಯಕ್ರಮ ಒಂದ್ರಲ್ಲಿ ಮಾತನಾಡ್ತ ಬಾಬಾ ರಾಮ್‌ದೇವ್, ʻನನ್ನದು ಬ್ರಹ್ಮಗೋತ್ರ, ನಾನು ಅಗ್ನಿಹೋತ್ರಿ ಬ್ರಾಹ್ಮಣ. ಆದ್ರೆ ನನ್ನನ್ನ ಜನ OBC ಅಂತಾರೆ ಅಂದಿದ್ರು. ಈ ಹೇಳಿಕೆ ವಿರುದ್ಧ ಆಕ್ರೋಷ ವ್ಯಕ್ತವಾದ್ಮೇಲೆ, ನಾನು OBC ಅಂದಿಲ್ಲ, ಓವೈಸಿ ಅಂದಿದ್ದು. AIMIM ಪಕ್ಷದ ಅಸದುದ್ದಿನ್‌ ಓವೈಸಿ ಹಾಗೂ ಅವ್ರ ಪೂರ್ವಜರು ದೇಶ ವಿರೋಧಿಗಳು ಅಂತೇಳಿ ಉಲ್ಟಾ ಹೊಡೆದಿದ್ದಾರೆ. ನಂತರ ಸಂಸದ ಅಸದುದ್ದಿನ್‌ ಓವೈಸಿ, ಬಾಬಾ ರಾಮ್‌ದೇವ್‌ ಮಾತಾಡಿರೋ ವೀಡಿಯೋ ಕ್ಲಿಪ್ಪನ್ನ ಶೇರ್‌ ಮಾಡಿ ಬಾಬಾ ಯೂ ಟರ್ನ್‌ ಮಾಡಿದ್ದಾರೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply