EU-ಯುಕ್ರೇನ್‌ ಬಿಗ್‌ ಮೀಟಿಂಗ್!‌ ಯುಕ್ರೇನ್‌ಗೆ EU ಬೆಂಬಲ!

masthmagaa.com:

ಸುಮಾರು 1 ವರ್ಷದಿಂದ ರಷ್ಯಾ ಆಕ್ರಮಣವನ್ನ ಎದುರಿಸ್ತಾ ಬಂದಿರೋ ಯುಕ್ರೇನ್‌, ಇದೀಗ ಯುರೋಪಿಯನ್‌ ಒಕ್ಕೂಟ ಸೇರೋ ಬಗ್ಗೆ ಮಾತಾಡಿದೆ. ಇಂದು ಅಂದ್ರೆ ಶುಕ್ರವಾರ ನಡೆಯಲಿರುವ EU-ಯುಕ್ರೇನ್‌ ಶೃಂಗಸಭೆಗೆ ಭಾಗಿಯಾಗಲು EUನ ಮುಖ್ಯಸ್ಥೆ ಉರ್ಸುಲಾ ವಾನ್‌ ಡೆರ್‌ ಲೆಯೆನ್‌ 15 ಅಧಿಕಾರಿಗಳ ತಂಡದೊಂದಿಗೆ ಯುಕ್ರೇನ್‌ಗೆ ಆಗಮಿಸಿದ್ದಾರೆ. ಈ ವೇಳೆ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಮಾತಾಡಿದ ಝೆಲೆನ್ಸ್ಕಿ ಈ ವರ್ಷದಲ್ಲಿ EU ಸೇರುವ ಕುರಿತು ಮಾತುಕತೆಗಳನ್ನ ಆರಂಭಿಸಬೇಕು. ಯುಕ್ರೇನ್‌ ಹಾಗೂ EUನ ಏಕತೆಯು ಯಾವುದೇ ಅಡೆತಡೆಗಳು ಹಾಗೂ ಬೆದರಿಕೆಗಳನ್ನ ಎದುರಿಸೋಕೆ ನಮ್ಮ ಜನರಿಗೆ ಶಕ್ತಿ ಹಾಗೂ ಪ್ರೇರಣೆ ಕೊಡಬೇಕು. ರಷ್ಯಾ ಮೇಲಿನ ಜಾಗತಿಕ ಒತ್ತಡ ಹೆಚ್ಚಾಗಬೇಕು ಅಂತ ಹೇಳಿದ್ದಾರೆ. ಇತ್ತ ಯುಕ್ರೇನ್‌-EU ಶೃಂಗಸಭೆಗೆ ಅಗಮಿಸಿರೊ ಉರ್ಸುಲಾ, ಮತ್ತೆ ಯುಕ್ರೇನ್‌ಗೆ ಬಂದಿರೋದು ಒಳ್ಳೇದು. ಯುದ್ದ ಆರಂಭವಾದಾಗಿನಿಂದ 4ನೇ ಬಾರಿ ಬರ್ತಿದೀನಿ. ನಾವು ಇಲ್ಲಿಗೆ ಬಂದಿರೋದು EU ಯುಕ್ರೇನ್‌ ಜೊತೆಯಿದೆ ಅನ್ನೊದನ್ನ ತೋರಿಸುತ್ತೆ. ಯುಕ್ರೇನ್‌ಗೆ ನೀಡೊ ಸಪೋರ್ಟ್‌ ಹಾಗೂ ಸಹಕಾರವನ್ನ ಈ ಭೇಟಿ ಇನ್ನಷ್ಟು ಹೆಚ್ಚಸುತ್ತೆ ಅಂತ ಟ್ವೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply