ಯುಕ್ರೇನ್‌ಗೆ ಆಗಸ್ಟ್‌ 24 ಸ್ವಾತಂತ್ರ ದಿನಾಚರಣೆ! ರಷ್ಯಾದಿಂದ ಭಾರಿ ದಾಳಿ ಇದೆ ಎಂದ ಝೆಲೆನ್ಸ್ಕಿ!

masthmagaa.com:

ನಮ್ಮ ಸ್ವಾತಂತ್ರ ದಿನದಂದು ರಷ್ಯಾ ನಮ್ಮ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಬಹುದು ಅಂತ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ ಆತಂಕ ವ್ಯಕ್ತಪಡಿಸಿದ್ದಾರೆ. ರಷ್ಯಾದಿಂದ ಬೇರ್ಪಟ್ಟು ಇದೇ ಆಗಸ್ಟ್‌ 24ಕ್ಕೆ ಯುಕ್ರೇನ್‌ ಸ್ವತಂತ್ರ ದೇಶ ಅನ್ನೋ ಸ್ಥಾನಮಾನ ಸಿಕ್ಕಿ 31 ವರ್ಷ ತುಂಬಲಿದೆ. ಅಲ್ದೇ ರಷ್ಯಾ ದಾಳಿ ಆರಂಭಿಸಿ ಕೂಡ ಇದೇ ಆಗಸ್ಟ್‌ 24ಕ್ಕೆ 6 ತಿಂಗಳು ಭರ್ತಿಯಾಗಲಿದೆ. ಹೀಗಾಗಿ ನಮ್ಮ ಮೇಲೆ ಅವರು ದೊಡ್ಡ ದಾಳಿ ನಡೆಸೋಕೆ ಯೋಜನೆ ರೂಪಿಸಿದ್ದಾರೆ. ಅಂತ ಹೇಳಿದ್ದಾರೆ. ಇದರ ಬೆನ್ನಲ್ಲೇ ರಾಜಧಾನಿ ಕಿಯೇವ್‌ ಹಾಗೂ ಖಾರ್ಕಿವ್‌ನಲ್ಲಿ ಎರಡು-ಮೂರು ದಿನಗಳ ಕಾಲ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply