ಕೊರೊನಾ ಹೊಸ ರೂಪಾಂತರಿ ಆರ್ಭಟ ಶುರು : ದಿನಕ್ಕೆ 15 ಲಕ್ಷ ಕೇಸಸ್

masthmagaa.com:

ಕೊರೊನಾದ ಹೊಸ XE ರೂಪಾಂತರಿ ಪತ್ತೆಯಾಗಿ ಎಲ್ಲೆಡೆ ಹರಡುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಚೀಫ್‌ ಸೆಕ್ರೆಟ್ರಿ ಅಂಟಾನಿಯೊ ಗುಟ್ರೆಸ್‌ ಮಾತನಾಡಿದ್ದಾರೆ. ಪ್ರತಿದಿನ 15 ಲಕ್ಷ ಹೊಸ ಕೊರೊನಾ ಪ್ರಕರಣಗಳು ವರದಿಯಾಗ್ತಿದೆ. ಯುರೋಪಿನಾದ್ಯಂತ ಹೊಸ ಅಲೆಯನ್ನು ಸೃಷ್ಟಿಸಿದೆ. ಹಾಗೆ ಏಷಿಯಾದಲ್ಲಿ ಏಕಾಎಕಿ ಜೋರಾಗಿ ಹರಡುತ್ತಿದೆ ಅಂತ ಅವ್ರು ಹೇಳಿದ್ದಾರೆ. ಜೊತೆಗೆ, ಆ್ಯವ್ರೆಜಾಗಿ ಪ್ರತಿ 4 ತಿಂಗಳಿಗೊಮ್ಮೆ ತನ್ನ ರೂಪ ಬದಲಿಸುವ ಕೊರೋನಾದ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಸರ್ಕಾರ ಮತ್ತು ಔಷಧಿ ಕಂಪನಿಗಳು ಈ ವಿಚಾರದಲ್ಲಿ ಒಟ್ಟಾಗಿ ಕೆಲ್ಸ ಮಾಡ್ಬೇಕು ಎಂದು ಆಗ್ರಹ ಮಾಡಿದ್ದಾರೆ..

-masthmagaa.com

Contact Us for Advertisement

Leave a Reply