ಇರಾನ್‌ನ ಮಸೀದಿ ಮೇಲೆ ದಾಳಿ ಓರ್ವ ಸಾವು, 8 ಜನಕ್ಕೆ ಗಾಯ!

masthmagaa.com:

ಇರಾನ್‌ನ ಮಸೀದಿಯೊಂದ್ರ ಮೇಲೆ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟು 8 ಜನ ಗಾಯಗೊಂಡಿದ್ದಾರೆ. ಓರ್ವ ಬಂದೂಕುದಾರಿ ಉಗ್ರ ಮಸೀದಿಯೊಳಗೆ ನುಗ್ಗಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಆತನನ್ನ ಬಂಧಿಸಲಾಗಿದೆ. ಘಟನೆ ಬೆನ್ನಲ್ಲೇ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ತನಿಖೆಗೆ ಆದೇಶ ನೀಡಿದ್ದಾರೆ ಅಂತ ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಘಟನೆ ನಡೆದ ಪ್ರಾರಂಭದಲ್ಲಿ 4 ಜನ ಮೃತಪಟ್ಟಿದ್ದಾರೆ ಅಂತ ಸುದ್ದಿಯಾಗಿದ್ದು, ಆ ಮಾಹಿತಿಯನ್ನ ಹಿಂಪಡೆಯಲಾಗಿದೆ. ಅಂದ್ರೆ ಅಲ್ಲಿ ಎಷ್ಟು ಜನ ಸತ್ತಿದ್ದಾರೆ ಅನ್ನೋದನ್ನ ಹೊರಗೆ ಬಿಡಲಾಗಿಲ್ಲ. ಇನ್ನು ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನ ಹೊತ್ತುಕೊಂಡಿಲ್ಲ.

-masthmagaa.com

Contact Us for Advertisement

Leave a Reply