ಯಾವ ಯಾವ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದೆ..?

masthmagaa.com:

ಕರ್ನಾಟಕದ ಜೊತೆಗೆ 15ಕ್ಕೂ ಹೆಚ್ಚು ರಾಜ್ಯಗಳು ಕೂಡ ಪೆಟ್ರೋಲ್ ಮತ್ತು ಡೀಸೆಲ್​ ಮೇಲಿನ ಟ್ಯಾಕ್ಸ್​ ಅನ್ನ ಕಮ್ಮಿ ಮಾಡಿವೆ. ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್​, ಬಿಹಾರ, ಗೋವಾ, ಹರಿಯಾಣ, ಉತ್ತಾರಖಂಡ್​, ಅಸ್ಸಾಂ, ತ್ರಿಪುರ, ಮಣಿಪುರ, ಸಿಕ್ಕಿಂ, ಮಿಜೋರಾಂ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಒಡಿಶಾ ಮುಂತಾದ ರಾಜ್ಯಗಳಲ್ಲಿ ತೆರಿಗೆ​ ಇಳಿಸಲಾಗಿದೆ. ಇದರಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಡಳಿತದಲ್ಲಿರೋ ರಾಜ್ಯಗಳೇ ಹೆಚ್ಚು. ಇದರಲ್ಲಿ ಉತ್ತರಪ್ರದೇಶ, ಗುಜರಾತ್​, ಉತ್ತರಾಖಂಡ್​, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.

ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಎರಡನ್ನೂ ತಲಾ 12 ರೂಪಾಯಿ ಕಮ್ಮಿ ಮಾಡಲಾಗಿದೆ. ಇದು ಹೈಯೆಸ್ಟ್. ಮತ್ತೊಂದುಕಡೆ ಪೆಟ್ರೋಲ್ ಡೀಸೆಲ್​ ಮೇಲಿನ ಟ್ಯಾಕ್ಸ್ ಕಮ್ಮಿ ಮಾಡಿರೋ ಬಗ್ಗೆ ರಾಜಕೀಯ ಕೂಡ ಜೋರಾಗಿದೆ. ರೇಟ್​ ಜಾಸ್ತಿ ಇದ್ದಾಗ ಕಮ್ಮಿ ಮಾಡಿ, ಕಮ್ಮಿ ಮಾಡಿ ಅಂತ ಲೆಕ್ಚರ್ ಕೊಡ್ತಿದ್ರಲಾ, ಈಗ ನೀವು ಆಡಳಿತದಲ್ಲಿರೋ ರಾಜ್ಯದಲ್ಲಿ ಕಮ್ಮಿ ಮಾಡಿ ಅಂತ ಬಿಜೆಪಿ ಉಳಿದ ವಿಪಕ್ಷಗಳಿಗೆ ಟಾಂಗ್​ ಕೊಟ್ಟಿದೆ. ಕಾಂಗ್ರೆಸ್ ನಾಯಕ ಪಿ ಚಿದಂಬರಂ ಟ್ವೀಟ್​ ಮಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತ ಬೆನ್ನಲ್ಲೇ ಟ್ಯಾಕ್ಸ್ ಕಮ್ಮಿ ಮಾಡಿದ್ದಾರೆ. ಬೈ ಎಲೆಕ್ಷನ್​​ನಿಂದ ಒಂದು ಬೈ ಪ್ರಾಡಕ್ಟ್ ಹೊರ ಬಂದಿದೆ ಅಂತ ಅವರು ವ್ಯಂಗ್ಯವಾಡಿದ್ದಾರೆ.

-masthmagaa.com

Contact Us for Advertisement

Leave a Reply