100 ಪ್ರಭಾವಿ ಭಾರತೀಯರ ಪಟ್ಟಿ! ಮೋದಿ ನಂ.1, ಶಾ ನಂ.2!

masthmagaa.com:

2024ರ ಸಾಲಿನ 100 ಪ್ರಭಾವಿ… ಪವರ್‌ಫುಲ್‌ ಭಾರತೀಯರ ಪಟ್ಟಿಯಲ್ಲಿ ಪಿಎಂ ನರೇಂದ್ರ ಮೋದಿ ಅಗ್ರ ಸ್ಥಾನದಲ್ಲಿದ್ದಾರೆ. ʻಇಂಡಿಯನ್‌ ಎಕ್ಸ್‌ಪ್ರೆಸ್‌ʼ ಪತ್ರಿಕೆ ಮಾಡಿದ್ದ ಈ ಪ್ರಭಾವಿ ಭಾರತೀಯರ ಲಿಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು RSS ಮುಖ್ಯಸ್ಥ ಮೋಹನ್‌ ಭಾಗವತ್‌ ಮೂರನೇ ಸ್ಪಾಟ್‌ನಲ್ಲಿದ್ದಾರೆ. ಇನ್ನುಳಿದಂತೆ CJI ಡಿವೈ ಚಂದ್ರಚೂಡ್‌, ವಿದೇಶಾಂಗ ಸಚಿವ ಎಸ್‌ ಜೈಶಂಕರ್‌, ಯುಪಿ ಸಿಎಂ ಯೋಗಿ ಆದಿತ್ಯನಾಥ್‌, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಅದಾನಿ ಗ್ರೂಪ್‌ನ ಗೌತಮ್‌ ಅದಾನಿ ಟಾಪ್‌ 10 ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಈ ಮೋಸ್ಟ್‌ ಪವರ್‌ಫುಲ್‌ ಭಾರತೀಯರ ಟಾಪ್‌ 10 ಲಿಸ್ಟ್‌ನಲ್ಲಿ ಆಲ್ಮೋಸ್ಟ್‌ ಅಧಿಕಾರದಲ್ಲಿರೋ ಬಿಜೆಪಿ ಸರ್ಕಾರದ ಪ್ರಭಾವಿ ನಾಯಕರುಗಳೇ ಇದ್ದಾರೆ. ಇನ್ನು ಈ 100 ಪ್ರಭಾವಿ ಭಾರತೀಯರ ಲಿಸ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವ್ರು 22ನೇ ಸ್ಥಾನದಲ್ಲಿದ್ರೆ, ತಮಿಳುನಾಡು ಸಿಎಂ ಎಮ್‌ ಕೆ ಸ್ಟಾಲಿನ್‌ 25ನೇ ಸ್ಪಾಟ್‌ನಲ್ಲಿ ಕೂತ್ಬಿಟ್ಟಿದ್ದಾರೆ.

-masthmagaa.com

Contact Us for Advertisement

Leave a Reply