ಹಗಲು-ರಾತ್ರಿ ಎನ್ನದೆ ಗಡಿಯಲ್ಲಿ 16 ಗಂಟೆ ಕಾಲ ಮಾತುಕತೆ!

masthmagaa.com:

ಭಾರತ-ಚೀನಾ ನಡುವೆ ಶನಿವಾರ ಬೆಳಗ್ಗೆ 10 ಗಂಟೆಗೆ ಆರಂಭವಾದ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಹಂತದ ಮಾತುಕತೆ ಭಾನುವಾರ ಬೆಳಗಿನಜಾವ 2 ಗಂಟೆಗೆ ಅಂತ್ಯವಾಗಿದೆ. ಅಂದ್ರೆ ಹಗಲು-ರಾತ್ರಿ ಎನ್ನದೆ ಬರೋಬ್ಬರಿ 16 ಗಂಟೆ ಕಾಲ ನಿರಂತರ ಸಭೆ ನಡೆದಿದೆ. LACಯ ಚೀನಾ ಬದಿಯಲ್ಲಿರೋ ಮೋಲ್ಡೋ ಎಂಬಲ್ಲಿ ಈ ಮೀಟಿಂಗ್​ ನಡೆದಿದೆ. ಮೀಟಿಂಗ್​ನಲ್ಲಿ ಗೋಗ್ರಾ, ಹಾಟ್​ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್​ ಪ್ರದೇಶದಲ್ಲಿ ಡಿಸ್​ಎಂಗೇಜ್ಮೆಂಟ್​ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯ್ತು. ಡಿಸ್​ಎಂಗೇಜ್ಮೆಂಟ್ ಅಂದ್ರೆ ಸೇನಾ ಹಿಂತೆಗೆತ ಅಂತರ್ಥ. ಪ್ಯಾಂಗಾಂಗ್​ ಸೋ ಲೇಕ್​ ಬಳಿ ಶುಕ್ರವಾರ ಡಿಸ್​ಎಂಗೇಜ್ಮೆಂಟ್​ ಪ್ರಕ್ರಿಯೆ ಪೂರ್ಣಗೊಂಡಿತ್ತು. ಅದರ ಬೆನ್ನಲ್ಲೇ ಉಳಿದ ಕಡೆ ಕೂಡ ಅದೇ ರೀತಿ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ಳಲು ಎರಡೂ ದೇಶಗಳು ಮುಂದಾಗಿವೆ. ಆದ್ರೆ ಸಭೆ ಯಶಸ್ವಿಯಾಯ್ತಾ? ಬೇರೆ ಕಡೆ ಕೂಡ ಡಿಸ್​ಎಂಗೇಜ್ಮೆಂಟ್​​ಗೆ ಎರಡೂ ಸೇನೆಗಳು ಒಪ್ಪಿದ್ವಾ? ಸಭೆಯಲ್ಲಿ ಏನೆಲ್ಲಾ ನಿರ್ಧಾರ ಕೈಗೊಳ್ಳಲಾಯ್ತು? ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

-masthmagaa.com

Contact Us for Advertisement

Leave a Reply