ಮತ್ತೆ ಭಾರತೀಯ ಮೀನುಗಾರರನ್ನ ಅರೆಸ್ಟ್‌ ಮಾಡಿದ ಶ್ರೀಲಂಕಾ!

masthmagaa.com:

ಶ್ರೀಲಂಕಾ ಜಲವ್ಯಾಪ್ತಿ ಪ್ರದೇಶಕ್ಕೆ ಹೋಗಿದ್ದ 12 ಭಾರತೀಯ ಮೀನುಗಾರರನ್ನ ಲಂಕಾ ನೇವಿ ಅರೆಸ್ಟ್‌ ಮಾಡಿದೆ. ಅಲ್ಲಿನ ಜಫ್ನಾ ಪೆನೆನ್ಸುಲಾದ ಕಾರೈನಗರ್‌ ಬಳಿಗೆ ಮೂರು ಬೋಟ್‌ಗಳಲ್ಲಿ ಭಾರತೀಯ ಮೀನುಗಾರರು ಹೋಗಿದ್ರು. ಅವ್ರನ್ನ ಲಂಕಾ ನೇವಿ ಅಲ್ಲಿನ ಕಂಕೇಸಂತುರೈ ಬಂದರಿನ ವರೆಗೆ ಎಸ್ಕಾರ್ಟ್‌ ಮಾಡಿ, ಅರೆಸ್ಟ್‌ ಮಾಡಿದೆ. ನಂತರ ಅವರ ಬೋಟ್‌ಗಳನ್ನ ವಶಪಡಿಸಿಕೊಂಡಿದೆ. ಆದ್ರೆ ಮುಂದಿನ ಕ್ರಮಗಳ ಬಗ್ಗೆ ಇನ್ನೂ ವರದಿಯಾಗಿಲ್ಲ. ಇನ್ನು ಕಳೆದ ವರ್ಷ ಲಂಕಾ ನೇವಿ ಒಟ್ಟು 240 ಮೀನುಗಾರರು ಹಾಗೂ 35 ಬೋಟ್‌ಗಳನ್ನ ವಶಪಡಿಸಿಕೊಂಡಿದೆ.

-masthmagaa.com

Contact Us for Advertisement

Leave a Reply