15 ಭಾರತೀಯರಿರೋ ಹಡಗು ಹೈಜಾಕ್:‌ INS ಚೆನ್ನೈ ಅಭಯ

masthmagaa.com:

ಸೊಮಾಲಿಯ ಬಂದರು ಬಳಿ ಲಿಬೇರಿಯಾಗೆ ಹೋಗ್ತಿದ್ದ ಹಡಗೊಂದನ್ನ ಪೈರೇಟ್‌ಗಳು ಹೈಜಾಕ್‌ ಮಾಡಿದ್ದಾರೆ. ‘MV LILA NORFOLK’ ಅನ್ನೋ ಈ ಹಡಗಿನಲ್ಲಿ 15 ಮಂದಿ ಭಾರತೀಯ ಮೂಲದ ಸಿಬ್ಬಂದಿ ಇದ್ದಾರೆ ಅಂತೇಳಲಾಗ್ತಿದೆ. ಗುರುವಾರ ಸಂಜೆ ಡಿಸ್ಟ್ರೆಸ್‌ ಕಾಲ್‌ ಬಂದ ಕೂಡಲೆ ಭಾರತದ ನೌಕಾಪಡೆಯ INS ಚೆನ್ನೈ ನೆರವಿಗೆ ಧಾವಿಸಿದೆ. ಹಡಗಿನಲ್ಲಿರೋ ಸಿಬ್ಬಂದಿ ಜೊತೆ ಸಂಪರ್ಕ ಸಾಧಿಸಲಾಗಿದೆ. ಅವ್ರು ಹಡಗಿನಲ್ಲಿರೋ ಸೇಫ್‌ ಹೌಸ್‌ನಲ್ಲಿ ಸೇಫಾಗಿದ್ದಾರೆ. ಸಿಚುಯೇಶನ್‌ನ್ನ ನಾವು ನಿರಂತರವಾಗಿ ಮಾನಿಟರ್‌ ಮಾಡ್ತಿದ್ದೀವಿ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply