ಸ್ವಿಜರ್‌ ಲ್ಯಾಂಡ್‌ನಲ್ಲಿ ಕಾಣಿಸಿಕೊಂಡಿದೆ ಭಯಾನಕ ವೈರಸ್‌!

masthmagaa.com:

ಕೊರೋನಾದ ಡೆಲ್ಟಾ ವೇಷಧಾರಿ 3, 4ನೇ ಅಲೆ ತರುತ್ತೆ ಅಂತ ಜಗತ್ತು ಹೆದರಿಕೊಂಡಿರುವಾಗಲೇ ಸ್ವಿಜರ್​ಲ್ಯಾಂಡ್​ನಲ್ಲಿ ಮತ್ತೊಂದು ಭಯಾನಕ ವೈರಸ್ ಪತ್ತೆಯಾಗಿದೆ. ಈ ಹಿಂದೆ ಪಶ್ಚಿಮ ಆಫ್ರಿಕಾದಲ್ಲಿ ಮೊಟ್ಟ ಮೊದಲ ಬಾರಿಗೆ ಪತ್ತೆಯಾಗಿದ್ದ ಮಾಬಗ್​ ವೈರಸ್ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಖುದ್ದಾಗಿ ಈ ಬಗ್ಗೆ ಮಾಹಿತಿ ನೀಡಿದೆ. ಸ್ವಿಜರ್​ಲ್ಯಾಂಡ್​​ನ ಗೆಕೆಡಿವ್ ಫ್ರಿಫೆಕ್ಚರ್​ನಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಬಿಟ್ಟಿದ್ರು. ಅವರ ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಅವರ ಸಾವಿಗೆ ಮಾಗಬ್ ವೈರಸ್ಸೇ ಕಾರಣ ಅಂತ ಗೊತ್ತಾಗಿದೆ. ಇದು ಎಬೋಲಾಗೆ ಹತ್ತಿರದ ವೈರಸ್ ಆಗಿದ್ದು, ಕೊರೋನಾ ರೀತಿಯಲ್ಲೇ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತೆ. ಬಾವಲಿಗಳ ಮೂಲಕ ಹರಡೋ ಈ ವೈರಾಣು, 88 ಪರ್ಸೆಂಟ್​​ನಷ್ಟು ಮರಣ ಪ್ರಮಾಣವನ್ನು ಹೊಂದಿದೆ. ಅಂದ್ರೆ ನೂರು ಮಂದಿಗೆ ಈ ವೈರಸ್ ಅಂಟಿದ್ರೆ 88 ಮಂದಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತೆ. ಇದು ತುಂಬಾ ವೇಗವಾಗಿ ಹರಡೋ ಸಾಮರ್ಥ್ಯ ಹೊಂದಿದ್ದು, ಇದನ್ನು ತಡೆಯಬೇಕಾದ ಅನಿವಾರ್ಯತೆ ಇದೆ ಅಂತ ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಪ್ರಾದೇಶಿಕ ನಿರ್ದೇಶಕ ಡಾ.ಮಟ್ಶಿಡಿಸೋ ಮೋಯ್ಟಿ ಹೇಳಿದ್ದಾರೆ. ಜಿನೇವಾದಲ್ಲಿ ಕಳೆದ ವರ್ಷ ಎಬೋಲಾ ಹಾವಳಿ ಶುರುವಾಗಿ, 12 ಮಂದಿ ಪ್ರಾಣ ಕಳೆದುಕೊಂಡಿದ್ರು. 2 ತಿಂಗಳ ಹಿಂದಷ್ಟೇ ಜಿನೇವಾದಲ್ಲಿ ಎಬೋಲಾ ಹಾವಳಿ ಅಂತ್ಯವಾಗಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು. ಆದ್ರೀಗ ಮತ್ತೆ ಮತ್ತೊಂದು ವೈರಸ್ ಅಟಕಾಯಿಸಿಕೊಂಡಿದೆ. ಇದು ಪ್ರಾದೇಶಿಕ ಮತ್ತು ದೇಶದ ಮಟ್ಟದಲ್ಲಿ ಅಪಾಯಕಾರಿಯಾದ್ರೂ, ಜಾಗತಿಕ ಮಟ್ಟದಲ್ಲಿ ಹಾವಳಿ ಇಡೋ ಸಾಧ್ಯತೆ ತುಂಬಾ ಕಡಿಮೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಹಿಂದೆ ಇದು ದಕ್ಷಿಣ ಆಫ್ರಿಕಾ, ಕೀನ್ಯಾ, ಅಂಗೋಲಾ, ಉಗಾಂಡಾ ಮತ್ತು ಕಾಂಗೋದಲ್ಲಿ ಈ ವೈರಾಣು ಪತ್ತೆಯಾಗಿತ್ತು.

-masthmagaa.com

Contact Us for Advertisement

Leave a Reply