ಲೆಬೆನಾನ್‌ನಲ್ಲಿನ ದಾಳಿಯಲ್ಲಿ ಮೃತಪಟ್ಟ ಇಬ್ಬರು ಆಸ್ಟ್ರೇಲಿಯನ್ನರು!

masthmagaa.com:

ಲೆಬೆನಾನ್‌ನಲ್ಲಿ ನಡೆದ ಇಸ್ರೇಲ್‌ ಏರ್‌ ಸ್ಟ್ರೈಕ್‌ ವೇಳೆ ಇಬ್ಬರು ಆಸ್ಟ್ರೇಲಿಯನ್ನರು ಮೃತಪಟ್ಟಿದ್ದಾರೆ ಅಂತ ಆಸೀಸ್‌ನ ಹಂಗಾಮಿ ವಿದೇಶಾಂಗ ಸಚಿವ ಮಾರ್ಕ್‌ ಡ್ರೇಫಸ್‌ ಹೇಳಿದ್ದಾರೆ. ಆಸೀಸ್‌ ನಾಗರಿಕರಾಗಿದ್ದ ಇಬ್ರಾಹಿಂ & ಅಲಿ ಅನ್ನೊ ಬಾಝಿ ಬ್ರದರ್ಸ್ ಸೌತ್‌ ಲೆಬೆನಾನ್‌ನಲ್ಲಿ ಈ ಇಸ್ರೇಲ್‌ ಏರ್‌ ಸ್ಟ್ರೈಕ್‌ ವೇಳೆ ಮೃತ ಪಟ್ಟಿದ್ದರು ಅಂತ ವರದಿಯಾಗಿದೆ. ಆದ್ರೆ ಅಲಿ ಬಾಝಿ ತನ್ನ ಹೋರಾಟಗಾರ ಅಂತ ಹಿಜ್ಬುಲ್ಲಾ ಉಗ್ರ ಸಂಘಟನೆ ಹೇಳಿತ್ತು. ಇದಕ್ಕೆ ಪ್ರತಿಯಾಗಿ ಡ್ರೇಫಸ್‌, ‘ನಾವ್‌ ಇದ್ರ ಬಗ್ಗೆ ತನಿಖೆ ನಡಸ್ತೀವಿ. ಆಸ್ಟ್ರೇಲಿಯಾ ಲಿಸ್ಟ್‌ ಮಾಡಿರೋ ಉಗ್ರ ಗುಂಪುಗಳಲ್ಲಿ ಹಿಜ್ಬುಲ್ಲಾ ಕೂಡ ಇದೆ. ಅದರೊಂದಿನ ನಮ್ಮ ನಾಗರಿಕರು ಸಹಕರಿಸಿದ್ರೆ ಅದು ಅಪರಾಧʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply