ಪಾಕ್‌ನಲ್ಲಿ ಮತ್ತೆ ಉಗ್ರರ ದಾಳಿ: ಇಬ್ಬರು ಸೈನಿಕರ ಬಲಿ, 15 ಜನರಿಗೆ ಗಾಯ!

masthmagaa.com:

ತಾಲಿಬಾನಿಗಳ ಮೇಲೆ ಪಾಕ್‌ ಸೇನೆ ಕಿರಿಕ್‌ ಮಾಡ್ಕೊಂಡ ಬೆನ್ನಲ್ಲೇ ನಿರೀಕ್ಷೆ ಮಾಡಿದಂತೆ ಪಾಕಿಸ್ತಾನದಲ್ಲಿ ವ್ಯಾಪಾಕ ಉಗ್ರದಾಳಿಗಳಾಗ್ತಿವೆ. ಮೊನ್ನೆ ಪಾಕ್‌ನಲ್ಲಿ ಸೇನಾ ಪೋಸ್ಟ್‌ ಮೇಲೆ ದಾಳಿಯಾಗಿತ್ತು. 7 ಪಾಕ್‌ ಸೈನಿಕರು ಮೃತಪಟ್ಟಿದ್ರು. ಅದರ ಬೆನ್ನಲ್ಲೇ ಪಾಕ್‌, ಅಫ್ಘಾನ್‌ ಮೇಲೆ ಏರ್‌ಸ್ಟ್ರೈಕ್‌ ಮಾಡಿತ್ತು. ಅದಕ್ಕೆ ತಾಲಿಬಾನ್‌ ಸರ್ಕಾರ ಕಿಡಿಕಾರಿತ್ತು. ಪಾಕಿಸ್ತಾನ ಬೆಲೆ ತೆರಬೇಕಾಗುತ್ತೆ ಅಂತ ಹೇಳಿತ್ತು. ಇದರ ನಡುವೆಯೇ ಪಾಕ್‌ನಲ್ಲಿ ಉಗ್ರರ ದಾಳಿಯಾಗಿದೆ. ಮೊನ್ನೆ ಗ್ವಾದರ್ ಬಂದರಿನಲ್ಲಿ ದಾಳಿಯಾಗಿತ್ತು. ಆ ಬಳಿಕ ಈಗ ಅಫ್ಘಾನಿಸ್ತಾನ ಗಡಿಯ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಉಗ್ರದಾಳಿಯಾಗಿದೆ. ಇಬ್ಬರು ಪಾಕ್ ಸೈನಿಕರು ಮೃತಪಟ್ಟು, 15 ಜನ ಗಾಯಗೊಂಡಿದ್ದಾರೆ. ತಾಲಿಬಾನಿಗಳ ಸ್ಟ್ರಾಂಗ್‌ ಜೊನ್‌ನಲ್ಲೆ ಈ ದಾಳಿ ನಡೆದಿದ್ದು ಇದನ್ನ ಯಾವುದೇ ಉಗ್ರ ಪಡೆ ದಾಳಿ ಹೊಣೆಯನ್ನ ಹೊತ್ಕೊಂಡಿಲ್ಲ. ಆದರೆ ಆಫ್ಘಾನ್‌ ತಾಲಿಬಾನ್‌ ಸರ್ಕಾರದ ಬೆಂಬಲಿತ ಟಿಟಿಪಿ ಅಂದ್ರೆ ಪಾಕಿಸ್ತಾನದ ತಾಲಿಬಾನ್‌ ಉಗ್ರರು ಇದನ್ನ ಮಾಡಿದಾರೆ ಅಂತ ಶಂಕೆ ವ್ಯಕ್ತಪಡಿಸಲಾಗಿದೆ.

-masthmagaa.com

Contact Us for Advertisement

Leave a Reply