WTCಮೇಲಿನ ದಾಳಿಯ ದಾಖಲೆ ಬಹಿರಂಗ ಪಡಿಸುತ್ತಾ ಅಮೆರಿಕ

masthmagaa.com:

ಅಮೆರಿಕ ಅಧಿಕಾರಿಗಳು 2001ರ ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿ ಸಂಬಂಧಿತ ದಾಖಲೆಗಳನ್ನು ಪುನರ್ ಪರಿಶೀಲನೆಗೆ ಮುಂದಾಗಿದ್ದಾರೆ. ಯಾಕಂದ್ರೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಬೇಕು ಅಂತ ಸಂತ್ರಸ್ಥರ ಕುಟುಂಬಗಳಿಂದ ನಿರಂತರವಾಗಿ ಒತ್ತಾಯ ಕೇಳಿ ಬರ್ತಿದೆ. ಹೀಗಾಗಿ ಈಗ ಮತ್ತೊಂದ್ಸಲ ಪುನರ್​​ ಪರಿಶೀಲನೆ ನಡೆಸಿ, ಯಾವೆಲ್ಲಾ ದಾಖಲೆಗಳನ್ನು ಬಹಿರಂಗಪಡಿಸಬಹುದು ಅಂತ ನಿರ್ಧರಿಸಲಿದ್ದಾರೆ. ನ್ಯೂಯಾರ್ಕ್​​ನ ದಕ್ಷಿಣ ಜಿಲ್ಲೆಯ ಅಟಾರ್ನಿಗೆ ಪತ್ರ ಬರೆದಿರೋ ಎಫ್​ಬಿಐ, ತನಗಿರೋ ದಾಖಲೆಗಳನ್ನು ಗೌಪ್ಯವಾಗಿಡೋ ವಿಶೇಷ ಹಕ್ಕಿನ ಬಗ್ಗೆ ಪುನರ್​ ಪರಿಶೀಲನೆ ನಡೆಸ್ತೀವಿ. ಮತ್ತು ಯಾವೆಲ್ಲಾ ದಾಖಲೆಗಳನ್ನು ಬಹಿರಂಗಪಡಿಸಬಹುದು ಅನ್ನೋದನ್ನ ನಿರ್ಧರಿಸ್ತೀವಿ ಅಂತ ಹೇಳಿದೆ. ಈ ದಾಳಿಯ ಸಂತ್ರಸ್ತರು ಮತ್ತು ಕುಟುಂಬಸ್ಥರು ದಾಳಿ ಹಿಂದೆ ಸೌದಿ ಅರೇಬಿಯಾ ಮತ್ತು ಇತರೆ ದೇಶಗಳ ಕೈವಾಡವೂ ಇದೆ ಅಂತ ಆರೋಪಿಸಿ ಕೋರ್ಟ್​​ನಲ್ಲಿ ಕಾನೂನು ಹೋರಾಟ ಮಾಡ್ತಿದ್ದಾರೆ. ದಾಖಲೆಗಳನ್ನು ಬಹಿರಂಗಪಡಿಸಲು ಕೇಳ್ತಿದ್ದಾರೆ. ಆದ್ರೆ ಈವರೆಗೆಗಿನ ಸರ್ಕಾರಗಳು ಈ ದಾಖಲೆಗಳು ದೇಶದ ರಹಸ್ಯ ದಾಖಲೆಗಳಾಗಿದ್ದು, ಅವುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಅಂತ ಹೇಳಿಕೊಂಡು ಬಂದಿದ್ರು. ಆದ್ರೀಗ ಇದೇ ಕಾನೂನು ಹೋರಾಟದಲ್ಲಿ ಎಫ್​ಬಿಐ ಅಂದ್ರೆ ಫೆಡರಲ್ ಬ್ಯೂರೋ ಇನ್ವೆಸ್ಟಿಗೇಷನ್​​, ಯಾವೆಲ್ಲಾ ದಾಖಲೆಗಳನ್ನು ಬಹಿರಂಪಡಿಸಬಹುದು ಅನ್ನೋದನ್ನ ಪರಿಶೀಲಿಸ್ತೀವಿ ಅಂತ ಹೇಳಿದೆ. ಎಫ್​ಬಿಐ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಸ್ವಾಗತಿಸಿದ್ದಾರೆ. ಅಂದಹಾಗೆ ಈ ದಾಳಿಯಲ್ಲಿ ಮೂರು ಸಾವಿರ ಜನ ಪ್ರಾಣ ಕಳೆದುಕೊಂಡಿದ್ರು.

-masthmagaa.com

Contact Us for Advertisement

Leave a Reply