‌ಮಾರ್ಗ ಮಧ್ಯೆ ದೋಣಿ ಮುಳುಗಡೆ: 21ಸಾವು, 33ಜನರ ರಕ್ಷಣೆ!

masthmagaa.com:

ದೋಣಿ ಮುಳುಗಡೆಯಾದ ಪರಿಣಾಮ 21ಜನ ವಲಸಿಗರು ಪ್ರಾಣ ಕಳ್ಕೊಂಡಿರೊ ಘಟನೆ ಪೂರ್ವ ಆಫ್ರಿಕಾದ ಜಿಬೌಟಿಯಲ್ಲಿ ನಡೆದಿದೆ. ಜಿಬೌಟಿಯ ಕರಾವಳಿಯಲ್ಲಿ ನಡೆದ ಈ ಘಟನೆಯಲ್ಲಿ 33ಜನರನ್ನ ರಕ್ಷಿಸಲಾಗಿದ್ದು, ಮೃತಪಟ್ಟ 21 ಜನರೂ ಇಥಿಯೋಪಿಯನ್ನರು ಅಂತ ಮಾಹಿತಿ ಲಭ್ಯ ಆಗಿದೆ. ಅಂದ್ಹಾಗೆ ಆಫ್ರಿಕಾದ ಇಥಿಯೋಪಿಯಾ ಹಾಗೂ ಸೋಮಾಲಿಯ ರಾಷ್ಟ್ರಗಳಿಂದ ಸೌದಿ ಅರೇಬಿಯ ಮತ್ತು ಇತರ ಗಲ್ಫ್‌ ದೇಶಗಳತ್ತ ಇದೇ ಜಿಬೌಟಿ ಮೂಲಕ ಜಲಮಾರ್ಗದಲ್ಲಿ ತೆರಳ್ತಾರೆ. ಹೀಗಾಗಿ ಅದ್ರ ಭಾಗವಾಗಿ ಗಲ್ಫ ದೇಶಗಳತ್ತ ವಲಸಿಗರು ಪ್ರಯಾಣ ಬೆಳೆಸೊ ವೇಳೆ ಮಾರ್ಗ ಮಧ್ಯೆ ಜಿಬೌಟಿಯಲ್ಲಿ ಈ ಘಟನೆಯಾಗಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply