ರೊಟ್‌ ವಿಲ್ಲರ್‌ ಸೇರಿದಂತೆ 23 ನಾಯಿ ತಳಿಗಳ ಬ್ಯಾನ್‌ಗೆ ಅಸ್ತು!

masthmagaa.com:

ಪಿಟ್‌ಬುಲ್ ಟೆರಿಯರ್‌, ಅಮೆರಿಕನ್‌ ಬುಲ್‌ಡಾಗ್ ಸೇರಿ ಒಟ್ಟು 23 ಜಾತಿಯ ಬಲಿಷ್ಠ ನಾಯಿತಳಿಗಳ ಮಾರಾಟ ಹಾಗೂ ಬ್ರೀಡಿಂಗ್‌ ಅಥವಾ ಸಂತಾನೋತ್ಪತಿಯನ್ನ ನಿಷೇಧಿಸೋಕೆ ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೊರಡಿಸಿರೋ ಸೂಚನೆಯಲ್ಲಿ ಒಟ್ಟು 23 ತಳಿಗಳ ನಾಯಿಗಳ ಸಾಕಾಣಿಕೆಗೆ ನಿರ್ಬಂಧ ಹೇರೋ ಬಗ್ಗೆ ತಿಳಿಸಲಾಗಿದೆ. ಈ ಲಿಸ್ಟ್‌ನಲ್ಲಿ ಪ್ರಮುಖವಾಗಿ ಅಮೆರಿಕನ್‌ ಸ್ಟಾಫರ್ಡ್‌ಶೈರ್‌ ಟೆರಿಯರ್‌, ಫಿಲಾ ಬ್ರೆಸಿಲಿಯೆರೊ, ಡೋಗೊ ಅರ್ಜೆಂಟಿನೊ, ರೊಟ್‌ ವಿಲ್ಲರ್‌ ಮತ್ತು ಮ್ಯಾಸ್ಟೀಫ್ಸ್‌ ತಳಿಗಳನ್ನ ಹೆಸರಿಸಲಾಗಿವೆ. ಅಂದ್ಹಾಗೆ ಇತ್ತೀಚಿಗೆ ಸಾಕು ನಾಯಿಗಳ ದಾಳಿಗಳು ಹೆಚ್ಚಾಗ್ತಿರೋ ಹಿನ್ನಲ್ಲೆ ಮಾನವನ ಜೀವನಕ್ಕೆ ಅಪಾಯಕಾರಿ ಅಂತೇಳಿ ಕೇಂದ್ರ ಈ ಕ್ರಮಕ್ಕೆ ಮುಂದಾಗ್ತಿದೆ. ಇನ್ನು ಇವುಗಳ ಆಮದು, ಕ್ರಾಸ್‌ ಬ್ರೀಡಿಂಗ್‌ಗಳ ಮೇಲೂ ನಿರ್ಬಂಧ ಹೇರೋಕೆ ಕೇಂದ್ರ ಆದೇಶಿಸಿದೆ.

-masthmagaa.com

Contact Us for Advertisement

Leave a Reply