ಒಡಿಶಾ ರೈಲು ದುರಂತ: ತಪ್ಪಾದ ಹಳಿಗೆ ಎಂಟ್ರಿ ನೀಡಿದ್ದೇ, ಅಪಘಾತಕ್ಕೆ ಕಾರಣ

masthmagaa.com:

ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರೋ ಒಡಿಶಾ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆ 288ಕ್ಕೆ ಏರಿಯಾಗಿದೆ. ಇದೀಗ ಅಫಘಾತಕ್ಕೆ ಸಂಬಂಧಪಟ್ಟಂತೆ ಟ್ರೈನುಗಳ ಟೈಮ್‌ ಲೈನ್‌ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಘಟನೆ ಸ್ಥಳದಲ್ಲಿ ಮೂರು ರೈಲ್ವೇ ಹಳಿಗಳಿದ್ವು. ಹೌರ್ರಾ ಸ್ಟೇಷನ್‌ನ್ನ 3.20ಕ್ಕೆ ಬಿಟ್ಟಿದ್ದ ಕೋರ್‌ಮಂಡಲ್‌ ಎಕ್ಸ್‌ಪ್ರೆಸ್‌, 6.30ಕ್ಕೆ ಬಾಲಾಸೋರ್‌ನ್ನ ತಲುಪಿದೆ. ಬಳಿಕ ಬಾಲಾಸೋರ್‌ ಸ್ಟೇಷನ್‌ನ್ನ ಬಿಟ್ಟ ಸುಮಾರು ಅರ್ಧ ಗಂಟೆ ಬಳಿಕ ಅಂದ್ರೆ 7 ಗಂಟೆ ಹೊತ್ತಿಗೆ ತಾನು ಹೋಗ್ತಿದ್ದ ಮೇನ್‌ ಲೈನ್‌ನಲ್ಲೇ ಹೋಗುವ ಬದಲು, ಟ್ರ್ಯಾಕ್‌ನ್ನ ಬದಲಿಸಿತ್ತು. ಹೀಗಾಗಿ ಬಹಾನಾಗ ನಿಲ್ದಾಣದ 100 ಮೀಟರ್‌ ದೂರದಲ್ಲಿ ರೈಲು ಹಳಿತಪ್ಪಿ, ಅಲ್ಲೇ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ ಅಂತ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ನಂತರ ಅದೇ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಬರ್ತಿದ್ದ ಯಶವಂತ್‌ಪುರ-ಹೌರ್ರಾ ರೈಲು 7.20ರ ಹೊತ್ತಿಗೆ ಕೋರ್‌ಮಂಡಲ್‌ ರೈಲನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಮಯದಲ್ಲಿ 2 ಟ್ರೈನ್‌ಗಳು ಅಧಿಕ ಸ್ಪೀಡ್‌ನಲ್ಲಿದ್ದವು, ಮೊದಲು ಅಫಘಾತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್‌ ಕೂಡ ಸ್ಪೀಡಲ್ಲೇ ಇತ್ತು. ಮತ್ತೆ ಹೌರ್ರಾ ಯಶವಂತಪುರ ಟ್ರೇನ್‌ ಕೂಡ ಸ್ಪೀಡಲ್ಲೇ ಬಂದು ಅಪ್ಪಳಿಸಿದೆ ಅಂತ ಗೊತ್ತಾಗಿದೆ. ಇನ್ನು ಘಟನೆ ಟೆಕ್ನಿಕಲ್‌ ಸಮಸ್ಯೆಯಿಂದ ಆಗಿದೆಯಾ ಅಥ್ವಾ ಲೊಕೋಪೈಲೆಟ್‌ ಅಂದ್ರೆ ಟ್ರೈನ್‌ನ ಡ್ರೈವರ್‌ನ ದೋಷದಿಂದ ಆಗಿದೆಯಾ ಅನ್ನೊದು ತಿಳಿದು ಬಂದಿಲ್ಲ. ಅಷ್ಟೇ ಅಲ್ಲ ಅಪಘಾತಕ್ಕೀಡಾದ ಟೈಮ್‌ ಲೈನ್‌ ಬಗ್ಗೆ ಕೂಡ ಇಲ್ಲಿ ತೀವ್ರ ಅನುಮಾನವನ್ನ ವ್ಯಕ್ತಪಡಿಸಲಾಗ್ತಿದೆ. ಯಾಕಂದ್ರೆ ಮೊದಲ ಅಪಘಾತ ಅಂದ್ರೆ ಗೂಡ್ಸ್‌ ರೈಲಿಗೆ ಕೋರಮಂಡಲ ರೈಲು ಡಿಕ್ಕಿ ಹೊಡಿದಿದ್ದು, ರೇಲ್ವೇ ಸ್ಟೇಷನ್‌ನಿಂದ ಕೇವಲ 100 ಮೀಟರ್‌ ದೂರದಲ್ಲಿ. ಅದಾದ ನಂತರ ಅಪಘಾತ ನಡೆದು 20 ನಿಮಿಷಗಳ ಬಳಿಕ ಮೂರನೇ ಟ್ರೇನ್‌ ಬಂದಿದೆ. ಈ 20 ನಿಮಿಷದಲ್ಲಿ 100 ಮೀಟರ್‌ ದೂರದಲ್ಲಿ ನಡೆದಿದ್ದ ಅಪಘಾತ ಸಿಬ್ಬಂದಿಗೆ ತಿಳಿಲಿಲ್ವಾ? ಇನ್ನೊಂದು ಟ್ರೈನ್‌ಗೆ ಮಾಹಿತಿ ನೀಡೋಕೆ ಇವರು ವಿಫಲರಾದ್ರಾ? ಅಥವಾ ದುರಂತ ತಪ್ಪಿಸೋಕೆ ಅವರಿಗೆ ಸಮಯ ಸಾಕಾಗಲಿಲ್ವಾ, ಅಧಿಕಾರಿಗಳು ವಿಚಲಿತರಾದ್ರಾ? ಎಲ್ಲಿ ಕಮುನಿಕೇಷನ್‌ ಗ್ಯಾಪ್‌ ಆಯ್ತು..ಈ ಎಲ್ಲಾ ಅನುಮಾನಗಳನ್ನ ಇದು ಹುಟ್ಟುಹಾಕಿದೆ.

ಇನ್ನು ಅಪಘಾತಕ್ಕೆ ಸಂಬಂಧಿಸಿಂತೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಘಟನೆ ಕುರಿತು ತನಿಖೆಗೆ ಆದೇಶ ನೀಡಿದ್ದಾರೆ. ಜೊತೆಗೆ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನಲೆಯಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸೋಕೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವ್ರನ್ನ ಸಿಎಂ ಸಿದ್ದರಾಮಯ್ಯ ನಿಯೋಜಿಸಿದ್ದಾರೆ. ಇನ್ನು ದುರಂತ ಸ್ಥಳಕ್ಕೆ ತೆರಳಿರುವ ಸಂತೋಷ್‌, ರಾಜ್ಯದ ಜನರನ್ನ ಸುರಕ್ಷಿತವಾಗಿ ಕರೆದುಕೊಂಡು ಬರುತ್ತೇವೆ ಅಂತ ಹೇಳಿದ್ದಾರೆ. ಇತ್ತ ಘಟನಾ ಸ್ಥಳಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳದ ಪ್ರಯಾಣಿಕರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ದೆ ತೀವ್ರ ಗಾಯಗೊಂಡವ್ರಿಗೆ 1 ಲಕ್ಷ ಹಾಗೂ ಅಲ್ಪ ಪ್ರಮಾಣದಲ್ಲಿ ಗಾಯಗೊಂಡವ್ರಿಗೆ 50 ಸಾವಿರ ರೂಪಾಯಿ ನೀಡೋದಾಗಿ ಅನೌನ್ಸ್‌ ಮಾಡಿದ್ದಾರೆ. ಇತ್ತ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಕೂಡ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವ್ರಿಗೆ 1 ಲಕ್ಷ ರೂಪಾಯಿ ಪರಿಹಾರ ಅನೌನ್ಸ್‌ ಮಾಡಿದ್ದಾರೆ. ಇದೇ ವೇಳೆ ಹಲವು ರಾಜ್ಯಗಳ ಉನ್ನತ ಮಟ್ಟದ ನಿಯೋಗಗಳು ಹಾಗೂ ರಕ್ಷಣಾ ಸಿಬ್ಬಂದಿ ಘಟನಾ ಸ್ಥಳವನ್ನ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇತ್ತ ಈ ಭೀಕರ ಘಟನೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇತ್ತ ರೈಲು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ 49 ರೈಲುಗಳ ಕಾರ್ಯಾಚರಣೆ ರದ್ದಾಗಿದ್ದು, 38 ರೈಲುಗಳ ಮಾರ್ಗವನ್ನ ಬದಲಾವಣೆ ಮಾಡಲಾಗಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply