ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿ: 2-0 ಅಂತರದಿಂದ ಮುನ್ನಡೆ ಸಾಧಿಸಿದ ಭಾರತ

masthmagaa.com:

ದಿಲ್ಲಿಯಲ್ಲಿ ನಡೆದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯ 2ನೇ ಪಂದ್ಯದಲ್ಲಿ ಆಸೀಸ್‌ ತಂಡವನ್ನ 6 ವಿಕೆಟ್‌ಗಳಿಂದ ಮಣಿಸಿ ಭಾರತ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ್ದ 115 ರನ್‌ಗಳ ಗುರಿಯನ್ನ ರೋಹಿತ್‌ ಪಡೆ ಮೂರನೇ ದಿನದಾಟದ 2ನೇ ಸೆಷನ್‌ನಲ್ಲಿಯೇ ಗುರಿ ತಲುಪಿದೆ. ಈ ಗೆಲುವಿನೊಂದಿಗೆ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆನ್ನುವ ಆಸೀಸ್ ತಂಡದ ಮಹಾ ಕನಸನ್ನ ಟೀಂ ಇಂಡಿಯಾ ಭಗ್ನ ಮಾಡಿದೆ. ಇದೀಗ ಈ ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಆಸೀಸ್ ಗೆದ್ದರೂ ಸರಣಿ ಸಮಬಲದೊಂದಿಗೆ ಅಂತ್ಯಗೊಳ್ಳಲಿದೆ.

-masthmagaa.com

Contact Us for Advertisement

Leave a Reply