ಪಾಕಿಸ್ತಾನದಲ್ಲಿ ಸ್ಪೋಟ! ಮೂವರು ಚೀನಿಯರು ಸೇರಿ 4 ಸಾವು!

masthmagaa.com:

ಪಾಕಿಸ್ತಾನದ ಕರಾಚಿ ಯೂನಿವರ್ಸಿಟಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಮೂವರು ಚೀನಿಯರು ಸೇರಿದಂತೆ 4 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕರಾಚಿ ಯೂನಿವರ್ಸಿಟಿಯ ಕನ್ಫ್ಯೂಷಿಯಸ್‌ ಇನ್ಸ್ಟಿಟ್ಯೂಟ್​ನ ಹೊರಗೆ ಘಟನೆ ನಡೆದಿದೆ. ಮೃತಪಟ್ಟವರೆಲ್ಲರೂ ಕನ್ಫ್ಯೂಷಿಯಸ್‌ ಇನ್ಸ್ಟಿಟ್ಯೂಟ್​​ನವರು ಅಂತ ಗೊತ್ತಾಗಿದೆ. ಸ್ಫೋಟದ ಜವಾಬ್ದಾರಿಯನ್ನ ಪಾಕಿಸ್ತಾನದಲ್ಲಿ ಬ್ಯಾನ್​ ಆಗಿರೋ ಬಲುಚ್​ ಲಿಬರೇಷನ್ ಆರ್ಮಿ ವಹಿಸಿಕೊಂಡಿದೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ಚೀನಿಯರ ಮೇಲಿನ ದಾಳಿಗಳು ಹೆಚ್ಚಾಗ್ತಾ ಇದೆ. ಚೀನಾ ಎಕಾನಾಮಿಕ್‌ ಕಾರಿಡರ್‌ ಹೆಸರಲ್ಲಿ ತನ್ನ ಪ್ರಭಾವ ಹರಡೋಕೆ ಪ್ರಯತ್ನ ಪಡ್ತಿದೆ ಅನ್ನೋ ಅಸಮಾಧಾನ ಕೂಡ ಕೆಲವರಿಗೆ ಇದೆ. ಚೀನಿಯರನ್ನ ಟಾರ್ಗೆಟ್​ ಮಾಡ್ತಿರೋದಕ್ಕೂ ಈ ವಿಚಾರಗಳಿಗೂ ಲಿಂಕ್‌ ಮಾಡಲಾಗ್ತಿದೆ. ಇದೂ ಕೂಡ ಅದೇ ಕೆಟಗರಿಗೆ ಸೇರಿರಬಹುದಾ ಅನ್ನೋ ಅನುಮಾನ ದಟ್ಟವಾಗ್ತಿದೆ.

-masthmagaa.com

Contact Us for Advertisement

Leave a Reply