ದರ್ಶನ್ ಮಾಡಿದ ಒಂದೇ ಮನವಿಗೆ 3 ಕೋಟಿ ದೇಣಿಗೆ ಸಂಗ್ರಹ!!

masthmagaa.com:

ಮೈಸೂರು: ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ನಿಂದಾಗಿ ಎಲ್ಲ ರಾಜ್ಯದ ಮೃಗಾಲಯಗಳೆಲ್ಲ ಬಂದ್ ಅಗಿತ್ತು. ಇದರಿಂದಾಗಿ ಮೃಗಾಲಯ ಪ್ರಾಧಿಕಾರಕ್ಕೆ ದೊಡ್ಡ ನಷ್ಟವೇ ಉಂಟಾಗಿತ್ತು. ಪ್ರಾಣಿ-ಪಕ್ಷಿಗಳ ನಿರ್ವಹಣೆಯೂ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ಮನವಿ ಮಾಡಿದ್ದರು. ರಾಜ್ಯದ 9 ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದು, ಅವುಗಳ ನಿರ್ವಹಣೆಗೆ ಸಹಾಯ ಮಾಡಿ ಎಂದು ವಿಡಿಯೋ ಮೂಲಕ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದರು.

ದರ್ಶನ್ ಮಾಡಿದ ಒಂದೇ ಮನವಿಗೆ ಕಳೆದ 20 ದಿನಗಳಲ್ಲಿ ಸುಮಾರು 3 ಕೋಟಿ ರು. ಹಣ ದೇಣಿಗೆಯಾಗಿ ಬಂದಿದೆ. ದರ್ಶನ್ ಕರೆ ನೀಡುತ್ತಿದ್ದಂತೆಯೇ ಅಭಿಮಾನಿಗಳಿಂದ ಲಕ್ಷ ಲಕ್ಷ ಹಣ ದೇಣಿಗೆ ರೂಪದಲ್ಲಿ ಮೃಗಾಲಯಕ್ಕೆ ಹರಿದುಬಂದಿದೆ. ರಾಜ್ಯದ 9 ಮೃಗಾಲಯದ ಪ್ರಾಣಿ-ಪಕ್ಷಿಗಳನ್ನು Zoos of Karnantaka ಆ್ಯಪ್ ಮೂಲಕ ಸುಮಾರು 6 ಸಾವಿರ ಜನರು ದತ್ತು ಪಡೆದಿದ್ದಾರೆ. ಬರೀ ದರ್ಶನ್‌ ಅಭಿಮಾನಿಗಳು ಮಾತ್ರವಲ್ಲದೆ, ಸಿನಿಮಾ ಕಲಾವಿದರು ಕೂಡ ದತ್ತು ಪಡೆದುಕೊಂಡಿದ್ದಾರೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವ ಸ್ವಾಮಿ ತಿಳಿಸಿದ್ದಾರೆ.

masthmagaa.com

Contact Us for Advertisement

Leave a Reply