ಶಾರುಖ್‌ ಖಾನ್‌ ಸಿನಿ ಜೀವನಕ್ಕೆ 31 ವರ್ಷ!

masthmagaa.com:

ಜೂನ್‌ 25 ಅಂದ್ರೆ ನಿನ್ನೆ ಶಾರುಖ್‌ ಖಾನ್‌ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು 31 ವರ್ಷಗಳು ಕಳೆಯಿತು. 1992ರಲ್ಲಿ ಶಾರುಖ್‌ ಖಾನ್‌ ಅಭಿನಯದ ಅವರ ಮೊದಲ ದೀವಾನ ಮೂವಿ ರಿಲೀಸ್‌ ಆಗಿತ್ತು. ಇದೇ ಖುಷಿಗೆ ನಿನ್ನೆ ಶಾರುಖ್‌ ಖಾನ್‌ ತನ್ನ ಅಭಿಮಾನಿಗಳಿಗೆ ಆಸ್ಕ್‌ ಮಿ ಎನಿಥಿಂಗ್‌ ಅಂತ ಪೋಸ್ಟ್‌ ಮಾಡಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ರು. ಇದೇ ಟೈಮ್‌ನಲ್ಲಿ ಮೋದಿ ಅವರ ವಿದೇಶಿ ಪ್ರವಾಸದಲ್ಲಿ ದಕ್ಷಿಣ ಏಷ್ಯಾದ ಕ್ಯಾಪೆಲ್ಲಾ ಗ್ರೂಪ್ ಪೆನ್ ಮಸಾಲಾ ಶ್ವೇತಭವನದಲ್ಲಿ ಶಾರುಖ್ ಅವರ 1998 ದಿಲ್‌ ಸೇ ಮೂವಿಯ ಚೈಯ್ಯಾ ಚೈಯ್ಯಾ ಸಾಂಗ್‌ ಎಲ್ಲರನ್ನೂ ಆಕರ್ಷಿಸಿತ್ತು. ಯುಎಸ್‌ನ ಶ್ವೇತಭವನದಲ್ಲಿ ಈ ಹಾಡಿನ ಮೂಲಕ ಪ್ರಧಾನಿ ಮೋದಿಯನ್ನು ಸ್ವಾಗತಿಸಿದಾಗ ನಿಮಗೆ ಏನ್‌ ಅನ್ನಿಸ್ತು ಅಂತ ಕೇಳಿದ್ರು.

“ಆ ಸಾಂಗ್‌ ಅನ್ನ ಕೇಳಿ ನನಗೂ ಡಾನ್ಸ್ ಮಾಡಬೇಕು ಅಂತ ಅನಿಸಿತ್ತು, ಆದ್ರೆ ಶ್ವೇತಭವನದ ಒಳಗೆ ರೈಲನ್ನ ಬಿಡೋದಿಲ್ಲ ಅಂತ ನನಗೆ ಅನಿಸತ್ತೆ” ಅಂತ ತಮಾಷೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply