ನೇಪಾಳ ಪ್ರಧಾನಿ ಒಲಿಗೆ ‘ಸುಪ್ರೀಂ‌ʼ ಶಾಕ್!

masthmagaa.com:

ನೇಪಾಳ ಪ್ರಧಾನ ಮಂತ್ರಿ ಕೆ.ಪಿ ಶರ್ಮಾ ಒಲಿಯವರಿಗೆ ಸುಪ್ರೀಂಕೋರ್ಟ್​ ಬಿಗ್ ಶಾಕ್ ಕೊಟ್ಟಿದೆ. ವಿಸರ್ಜನೆಗೊಳಿಸಿದ್ದ ಸಂಸತ್​​ನ್ನು ಪುನರ್​​ಸ್ಥಾಪಿಸುವಂತೆ ಸುಪ್ರೀಂಕೋರ್ಟ್​ ಮತ್ತೆ ಆದೇಶಿಸಿದೆ. ಕಮ್ಯೂನಿಸ್ಟ್​ ಪಕ್ಷದ ಮತ್ತೊಂದು ಬಣದ ನಾಯಕ ಪಿಕೆ ದಹಲ್ ಪ್ರಚಂಡ ಜೊತೆಗಿನ ನಿರಂತರ ಹಗ್ಗಜಗ್ಗಾಟದ ಬಳಿಕ ಡಿಸೆಂಬರ್ 20ರಂದು ಕೆಪಿ ಶರ್ಮಾ ಒಲಿ ಸಂಸತ್ ವಿಸರ್ಜಿಸಿ, ಏಪ್ರಿಲ್ 30 ಮತ್ತು ಮೇ 10ರಂದು ಚುನಾವಣೆ ಘೋಷಿಸಿದ್ರು. ಈ ಸಂಬಂಧ ಒಲಿ ವಿರೋಧಿ ಬಣ ಕೋರ್ಟ್​ ಮೆಟ್ಟಿಲೇರಿತ್ತು.

ಇದೀಗ ಸಂಸತ್ ವಿಸರ್ಜನೆಯನ್ನು ಅಸಂವಿಧಾನಿಕ ಅಂತ ಕರೆದಿರುವ ಸುಪ್ರೀಂಕೋರ್ಟ್​​​, 13 ದಿನಗಳ ಒಳಗಾಗಿ ಸದನವನ್ನು ಪುನರ್​ ಸ್ಥಾಪಿಸಬೇಕೆಂದು ತೀರ್ಪು ನೀಡಿದೆ. ಇದ್ರಿಂದ ಸಂಸತ್ ವಿಸರ್ಜಿಸಿ ಎಲೆಕ್ಷನ್​​ಗೆ ಹೊರಟಿದ್ದ ಕೆಪಿ ಶರ್ಮಾ ಒಲಿ ಬುಡಕ್ಕೆ ಬಿಸಿನೀರು ಬಿಟ್ಟಂತಾಗಿದೆ. ಆದ್ರೆ ಕೋರ್ಟ್​​ನಲ್ಲಿ ಹಿನ್ನೆಡೆಯಾದ ಮಾತ್ರಕ್ಕೆ ಕೆಪಿ ಶರ್ಮಾ ಒಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡೋದಿಲ್ಲ.. ವಿಶ್ವಾಸಮತ ಯಾಚನೆ ಮಾಡಲಿದ್ದಾರೆ ಅಂತ ಅವರ ಆಪ್ತಮೂಲಗಳು ಹೇಳಿವೆ.

-masthmagaa.com

Contact Us for Advertisement

Leave a Reply