ಮತಾದನದ ಬಳಿಕ ಜೋರಾದ ಬೆಟ್ಟಿಂಗ್‌! 1.5 ಕೋಟಿ ಮೌಲ್ಯದ ಆಸ್ತಿ ಪಣಕ್ಕೆ!

masthmagaa.com:

ರಾಜ್ಯದಲ್ಲಿ ಮತದಾನ ಮುಗಿಯುತ್ತಿದ್ದಂತೆ ಬೆಟ್ಟಿಂಗ್‌ ಭರಾಟೆ ಜೋರಾಗಿದೆ. ಭಾರಿ ಕುತೂಹಲ ಮೂಡಿಸಿರುವ ವರುಣಾ ಕ್ಷೇತ್ರದಲ್ಲಿ ವಿ ಸೋಮಣ್ಣ ಪರ ಬೆಟ್ಟಿಂಗ್‌ ಭರ್ಜರಿಯಾಗಿದೆ. ಸಿದ್ದರಾಮಯ್ಯ ವಿರುದ್ಧ ಸೋಮಣ್ಣ 25 ಸಾವಿರ ಮತಗಳಿಂದ ಗೆಲುವು ಸಾಧಿಸ್ತಾರೆ ಅಂತ ಬಾಜಿ ಕಟ್ಟಿದ್ದಾರೆ. ಅಲ್ದೇ ತಾವು ಹೇಳಿದ್ದು ಸುಳ್ಳಾದ್ರೆ, 3,300 ಚದರಡಿ ನಿವೇಶನ ನೀಡೋದಾಗಿ ಅಗ್ರಿಮೆಂಟ್‌ ಮಾಡಿಕೊಡ್ತೀನಿ ಅಂತ ವ್ಯಕ್ತಿಯೊಬ್ಬ ಬಹಿರಂಗ ಸವಾಲ್‌ ಹಾಕಿರೊ ವಿಡಿಯೋ ವೈರಲ್‌ ಆಗಿದೆ. ಇನ್ನೊಂದ್‌ ಕಡೆ ಕನಕಗಿರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ತಾರೆ ಅಂತ ಕಾರಟಗಿಯ ಸತ್ಯಪ್ರಕಾಶ ಚೌದರಿ ಅನ್ನೊರು ಸುಮಾರು 1.5 ಕೋಟಿ ಮೌಲ್ಯದ ಆಸ್ತಿ ಬೆಟ್ಟಿಂಗ್‌ ಮಾಡಿದ್ದಾರೆ. ಅಲ್ದೇ ಅವರ ಜೊತೆ ಬೆಟ್ಟಿಂಗ್‌ ಕಟ್ಟಲು ಇಂದು ಸಂಜೆವರೆಗೆ ಸಂಪರ್ಕ ಮಾಡಿ ಅಂತ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ. ಸುಮಾರು 1 ಕೋಟಿ ಮೌಲ್ಯದ 4.3 ಎಕರೆ ಬತ್ತದ ಗದ್ದೆ ಹಾಗೂ 50 ಲಕ್ಷ ಬೆಲೆ ಬಾಳುವ ಬಿಲ್ಡಿಂಗ್ ಪಂದ್ಯಕ್ಕೆ ಇಟ್ಟಿದ್ದಾರೆ.

-masthmagaa.com

Contact Us for Advertisement

Leave a Reply