ಸೌತ್ ಆಫ್ರಿಕಾದಲ್ಲಿ ಬಸ್ ಅಪಘಾತ: 45ಜನ ಸಾವು, ಒಬ್ಬರಿಗೆ ಗಂಭೀರ ಗಾಯ!

masthamagaa.com:

ಚಾಲಕನ ನಿಯಂತ್ರಣ ತಪ್ಪಿ ಬಸ್‌ವೊಂದು ಭೀಕರ ಅಪಘಾತಕ್ಕೀಡಾದ ಪರಿಣಾಮ ಕನಿಷ್ಠ 45 ಜನ ಮೃತಪಟ್ಟಿರೊ ಘಟನೆ ಸೌತ್‌ ಆಫ್ರಿಕಾದಲ್ಲಿ ನಡೆದಿದೆ. ಅಲ್ಲಿನ ಲಿಂಪೊಪೊ ಪ್ರಾಂತ್ಯದ ಉತ್ತರ ಭಾಗದಲ್ಲಿ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್‌, ತಡೆಗೋಡೆಗೆ ಗುದ್ದಿ ಸೇತುವೆ ಕೆಳಗೆ ಬಿದ್ದಿದೆ. ನಂತರ ಅದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಗಾಯಗೊಂಡಿದ್ದ ಜನರು ಬಸ್‌ನಿಂದ ಹೊರಗೆ ಬರೋಕೆ ಆಗಿಲ್ಲ. ಕೆಲವರಂತು ಗುರುತು ಸಿಗದ ಹಾಗೇ ಸುಟ್ಟು ಕರಕಲಾಗಿದ್ದಾರೆ ಅಂತ ವರದಿಯಾಗಿದೆ. ಶವಗಳನ್ನ ಹೊರತೆಗೆಯಲು ರಕ್ಷಣಾ ತಂಡಗಳು ಹರಸಾಹಸ ಪಡ್ತಿದೆ ಅಂತ ಮಾಹಿತಿ ಲಭ್ಯವಾಗಿದೆ.

-masth,magaa.com

Contact Us for Advertisement

Leave a Reply