ನಕಲಿ ಸಿಮ್‌ ಜಾಲದಲ್ಲಿ ಪೋಲಿಸರ ಬಲೆಗೆ ಬಿದ್ದ ಯುವಕರ ತಂಡ!

masthmagaa.com:

ಮಂಗಳೂರಿನಿಂದ ಬೆಂಗಳೂರಿಗೆ ತೆರಳ್ತಿದ್ದ ಅನುಮಾನಸ್ಪದ ಯುವಕರ ಟೀಮ್‌ವೊಂದನ್ನ ಧರ್ಮಸ್ಥಳ ಪೋಲಿಸರು ಬಂಧಿಸಿದ್ದಾರೆ. ಅಕ್ರಮ ಸಿಮ್‌ಗಳ ಸಾಗಾಟ ಮಾಡ್ತಿದ್ದ ವೇಳೆ ಐವರು ಯುವಕರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವ್ರ ಮೇಲೆ ಶಂಕೆ ವ್ಯಕ್ತವಾದ ಹಿನ್ನಲೆ ಪೋಲಿಸರು ಅವ್ರನ್ನ ಬಂಧಿಸಿದ್ದು, 42 ಅಕ್ರಮ ಸಿಮ್‌ಗಳನ್ನ ವಶ ಪಡಿಸಿಕೊಳ್ಳಲಾಗಿದೆ. ಈ ಸಿಮ್‌ಗಳು ಬೆಂಗಳೂರಿನಲ್ಲಿರೋ ಶಂಕ್ಯಾಸ್ಪದ ವ್ಯಕ್ತಿಗಳ ಕೈ ಸೇರ್ತಿದ್ವು ಅಂತ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಕ್ಬರ್‌ ಅಲಿ ಅನ್ನೋ ಯುವಕ ದುಬೈನಲ್ಲಿ ಇದ್ಕೊಂಡು ಬೇರೆ ಬೇರೆ ಜನರ ಹೆಸರಲ್ಲಿ ಸಿಮ್‌ಗಳನ್ನ ಖರೀದಿ ಮಾಡಿದ್ದಾನೆ. ಈ ಜಾಲದಲ್ಲಿರೋ ಇನ್ನಿತರರು ಆ ಸಿಮ್‌ಗಳನ್ನ ಬೆಂಗಳೂರಿನಲ್ಲಿರೋ ವ್ಯಕ್ತಿಗಳಿಗೆ ಸಪ್ಲೈ ಮಾಡ್ತಿದ್ರು ಅಂತ ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ 17 ವರ್ಷದ ಅಪ್ರಾಪ್ತ ಬಾಲಕ ಕೂಡ ಸೇರಿದ್ದಾನೆ.

-masthmagaa.com

Contact Us for Advertisement

Leave a Reply