ಪ್ರಧಾನಿ ಮೋದಿ ಭದ್ರತಾ ವೈಫಲ್ಯ: ತನಿಖೆಗೆ ಸಮಿತಿ ರಚನೆ

masthmagaa.com:

ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾ ವೈಫಲ್ಯ ಸಂಬಂಧ ತನಿಖಾ ಸಮಿತಿಯನ್ನು ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ರಚಿಸಲಾಗುತ್ತೆ. ಇದ್ರಲ್ಲಿ ರಾಷ್ಟ್ರೀಯ ತನಿಖಾ ದಳ ಮತ್ತು ಪಂಜಾಬ್ ಪೊಲೀಸರು ಕೂಡ ಭಾಗವಾಗಲಿದ್ದಾರೆ ಅಂತ ಸುಪ್ರೀಂಕೋರ್ಟ್​ ಹೇಳಿದೆ. ಈ ಪ್ರಕರಣದಲ್ಲಿ ಒನ್​ ಸೈಡೆಡ್ ತನಿಖೆ ನಡೆಸಲು ಸಾಧ್ಯವಿಲ್ಲ. ಸ್ವತಂತ್ರ ತನಿಖೆ ನಡೆಯಬೇಕಿದೆ. ಈ ತನಿಖಾ ಸಮಿತಿ ಭದ್ರತಾ ವೈಫಲ್ಯಕ್ಕೆ ಕಾರಣವೇನು? ಯಾರು ಹೊಣೆ? ಮುಂದೆ ಹಾಗಾಗದಂತೆ ತಡೆಯಲು ಏನು ಮಾಡ್ಬೇಕು? ಅನ್ನೋದರ ಬಗ್ಗೆ ತನಿಖೆ ನಡೆಸಿ, ಆದಷ್ಟು ಬೇಗ ವರದಿ ಸಲ್ಲಿಸಬೇಕು ಅಂತ ಕೂಡ ಕೋರ್ಟ್ ಹೇಳಿದೆ. ಅಂದಹಾಗೆ ಎನ್​​ಐಎ ಡಿಜಿ, ಚಂಡೀಗಡ ಪೊಲೀಸ್ ಚೀಫ್, ಪಂಜಾಬ್ ಪೊಲೀಸ್​​ನ ಎಡಿಜಿ, ಪಂಜಾಬ್ ಹರಿಯಾಣ ಹೈಕೋರ್ಟ್​​ನ ರಿಜಿಸ್ಟ್ರಾರ್ ಜನರಲ್​​ ಕೂಡ ಈ ಸಮಿತಿಯ ಭಾಗವಾಗಿರಲಿದ್ದಾರೆ.

-masthmagaa.com

Contact Us for Advertisement

Leave a Reply