ಫ್ರಾನ್ಸ್‌ನಿಂದ ಬ್ರಿಟನ್‌ಗೆ ವಲಸೆ: ನೀರಿನಲ್ಲಿ ದೋಣಿ ಸಿಲುಕಿ 5 ಸಾವು!

masthmagaa.com:

ಫ್ರಾನ್ಸ್‌ನಲ್ಲಿ ಮಾರ್ಗ ಮಧ್ಯೆ ನೀರಿನಲ್ಲಿ ದೋಣಿ ಸಿಲುಕಿದ ಪರಿಣಾಮ ಮಗು ಸೇರಿದಂತೆ ಒಟ್ಟು ಐದು ಜನ ಮೃತಪಟ್ಟಿದ್ದಾರೆ. ಇಂಗ್ಲಿಷ್‌ ಚಾನೆಲ್‌ನಲ್ಲಿ ಫ್ರಾನ್ಸ್‌ನ ಉತ್ತರ ಕರಾವಳಿಯಿಂದ ಬ್ರಿಟನ್‌ನ ದಕ್ಷಿಣ ಕರಾವಳಿಗೆ ವಲಸೆ ಹೋಗ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಿಕ್ಕಿರಿದು ತುಂಬಿದ್ದ ದೋಣಿ ಜನರ ಭಾರ ತಡೆಯಲಾರದೇ ಮಗುಚಿಬಿದ್ದು ಈ ದುರ್ಘಟನೆ ಉಂಟಾಗಿದೆ. ಇನ್ನು ಸ್ಥಳಕ್ಕೆ ಧಾವಿಸಿದ ಫ್ರೆಂಚ್‌ ನೌಕಾ ಪಡೆ, ದೋಣಿಯಲ್ಲಿನ 49 ಜನರನ್ನ ರಕ್ಷಿಸಿದೆ. ಆದ್ರೆ ಇನ್ನುಳಿದ 58 ಜನ ದೋಣಿಯಿಂದ ಕೆಳಗಿಳಿಯಲು ನಿರಾಕರಿಸಿ ಬ್ರಿಟನ್‌ನತ್ತ ತಮ್ಮ ಪ್ರಯಾಣನ್ನ ಮುಂದುವರೆಸಿದ್ದಾರೆ ಅಂತ ಫ್ರೆಂಚ್‌ ಅಧಿಕಾರಿಗಳು ತಿಳಿಸಿದ್ದಾರೆ. ಬ್ರಿಟನ್‌ನತ್ತ ವಲಸೆ ಬರೋರನ್ನ ರುವಾಂಡಗೆ ಕಳುಹಿಸೊ ಸಂಬಂಧ ಬ್ರಿಟನ್‌ ಪಾರ್ಲಿಮೆಂಟ್‌ನಲ್ಲಿ ಬಿಲ್‌ವೊಂದು ಪಾಸಾದ ಕೆಲವೇ ಗಂಟೆಗಳಲ್ಲಿ ಈ ಘಟನೆಯಾಗಿದೆ.

-masthmagaa.com

Contact Us for Advertisement

Leave a Reply