ಮಧ್ಯಪ್ರದೇಶ: ಬೋರ್‌ವೆಲ್‌ಗೆ ಬಿದ್ದು ರಕ್ಷಣೆ ಮಾಡಲಾದ 5 ವರ್ಷದ ಪುಟ್ಟ ಬಾಲಕಿ ಸಾವು!

masthmagaa.com:

25 ಅಡಿ ಆಳದ ಬೋರ್‌ವೆಲ್‌ ಒಳಗೆ ಬಿದ್ದು, 5 ವರ್ಷದ ಪುಟ್ಟ ಬಾಲಕಿ ಪ್ರಾಣ ಕಳೆದುಕೊಂಡಿರೋ ಘಟನೆ ಮಧ್ಯ ಪ್ರದೇಶದ ರಾಜಗಢ ಜಿಲ್ಲೆಯಲ್ಲಿ ನಡೆದಿದೆ. ಮಾಹಿ ಅನ್ನೋ ಪುಟ್ಟ ಬಾಲಕಿ ಡಿಸೆಂಬರ್‌ 6 ರಂದು ತನ್ನ ಸಂಬಂಧಿಕರ ಮನೆಗೆ ಹೋಗಿದ್ದಳು. ಈ ವೇಳೆ ಅಲ್ಲಿನ ಗದ್ದೆಯಲ್ಲಿ ಆಟವಾಡ್ತಿರೋ ವೇಳೆ, ಅಲ್ಲೇ ಇದ್ದ ಬೋರ್‌ವೆಲ್‌ ಒಳಗೆ ಬಿದ್ದಿದ್ದಾಳೆ. ತಕ್ಷಣವೇ ಬಾಲಕಿಯ ಸಂಬಂಧಿಕರು ಈ ವಿಚಾರವನ್ನ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಪೊಲೀಸರು ರಕ್ಷಣಾ ತಂಡದವರೊಂದಿಗೆ ಆಕ್ಸಿಜನ್‌ ಸಿಲಿಂಡರ್‌ ಹಿಡಿದುಕೊಂಡು ಘಟನಾ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಸುದೀರ್ಘ 9 ಗಂಟೆಗಳ ಕಾರ್ಯಾಚರಣೆ ನಂತರ ಪುಟ್ಟ ಬಾಲಕಿ ಮಾಹಿಯನ್ನ ಬೋರ್‌ವೆಲ್‌ನಿಂದ ಹೊರ ತೆಗೆಯಲಾಗಿತ್ತು. ಆದ್ರೆ ಬೋರ್‌ವೆಲ್‌ನಿಂದ ಹೊರ ತೆಗೆಯಲಾದ ಪುಟ್ಟ ಬಾಲಕಿ ತನ್ನ ಪ್ರಜ್ಞೆ ಕಳೆದುಕೊಂಡಿದ್ದಳು. ತಕ್ಷಣವೇ ಆಕೆಯನ್ನ ಭೋಪಾಲ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆದ್ರೆ ಡಾಕ್ಟರ್ಸ್‌ ಪುಟ್ಟ ಬಾಲಕಿ ಮಾಹಿ ಮೃತಪಟ್ಟಿರೋದನ್ನ ತಿಳಿಸಿದ್ದಾರೆ. ಅಂದ್ಹಾಗೆ ಮಾಹಿ ಡಿಸೆಂಬರ್‌ 5 ರಂದು ಸಂಜೆ ಸುಮಾರು 5 ಗಂಟೆಗೆ ಬೋರ್‌ವೆಲ್‌ ಒಳಗೆ ಬಿದ್ದಿದ್ದಾಳೆ. ಸಂಜೆ 6 ಗಂಟೆ ಸುಮಾರಿಗೆ ರಕ್ಷಣಾ ತಂಡ ಘಟನಾ ಸ್ಥಳಕ್ಕೆ ಬಂದಿದ್ರು. ಆದ್ರೆ ಆಕೆಯನ್ನು 9 ಗಂಟೆಗಳ ಕಾರ್ಯಾಚರಣೆ ನಂತರ ಸುಮಾರು ರಾತ್ರಿ 2 ಗಂಟೆಗೆ ಬೋರ್‌ವೆಲ್‌ನಿಂದ ಹೊರ ತೆಗೆಯಲಾಗಿತ್ತು.

-masthmagaa.com

Contact Us for Advertisement

Leave a Reply